Close X

ಇಂದು ವರದನಾಯಕನ ಸೆನ್ಸಾರ್ !

ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಅಭಿನಯದ ಅಯ್ಯಪ್ಪ ಶರ್ಮ ನಿರ್ದೇಶನದ “ವರದನಾಯಕ” ಚಿತ್ರವು ಇಂದು ಮಂಗಳವಾರ ಜನವರಿ 8ರಂದು ಸೆನ್ಸಾರ್ ಮಂಡಳಿಯ ವೀಕ್ಷಣೆಗೆ ಒಳಪಡುತ್ತದೆ. ಇಂದು ಸೆನ್ಸಾರ್‌ಗೆ ಅರ್ಜಿ ದಾಖಲಿಸಿದ ವರದನಾಯಕ ಚಿತ್ರ, ಕಡಿಮೆ ಚಿತ್ರಗಳು ಸೆನ್ಸಾರ್‌ನ ಸರದಿಯಲ್ಲಿದ್ದು ಫಲಿತಾಂಶವು ಸಂಜೆಯ ವೇಳೆಗೆ ಬರಲಿದೆ ಎಂದಿದ್ದಾರೆ ನಿರ್ಮಾಪಕ ಶಂಕರೇ ಗೌಡ.
ಚಿತ್ರವು ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ಕೆಲವು ಸೆಂಟಿಮೆಂಟಲ್ ಮತ್ತು ಆಕ್ಷ್ಯನ್ ದೃಶ್ಯಗಳನ್ನು ಒಳಗೊಂಡಿದೆ. ಚಿತ್ರಕ್ಕೆ U/A ಸರ್ಟಿಫಿಕೇಟ್ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ನಿರ್ಮಾಪಕ ಶಂಕರೇಗೌಡ.

Varadanayaka movie poster

Varadanayaka movie poster

ವರದನಾಯಕ ಚಿತ್ರವು ಜನವರಿ 18ರಂದು ಬಿಡುಗಡೆ ಗೊಳ್ಳಲಿದೆ ಎಂದಿದ್ದಾರೆ ನಿರ್ಮಾಪಕ ಶಂಕರೇಗೌಡ. ಇದೇ ದಿನ ಶಿವರಾಜ್ ಕುಮಾರ್ ಮತ್ತು ಪ್ರಿಯಾಮಣಿ ನಟನೆಯ ಲಕ್ಷ್ಮೀ ಚಿತ್ರವೂ ಬಿಡುಗಡೆಗೊಳ್ಳುತ್ತಿದೆ. ತ್ರಿವೇಣಿ ಚಿತ್ರಮಂದಿರದಲ್ಲಿ ವರದನಾಯಕ ಬಿಡುಗಡೆಗೊಂಡರೆ, ಲಕ್ಶ್ಮೀ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳುತ್ತಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech