Close X

ಉಪ್ಪಿ-2 ಮಾಡುವುದಕ್ಕೆ ಉಪೇಂದ್ರ ರೆಡಿ

14 ವರ್ಷದ ಹಿಂದೆ ಬಂದ “ಉಪೇಂದ್ರ” ಚಿತ್ರವನ್ನು ಮರೆತ್ತಿಲ್ಲಾ ಅಲ್ವಾ ? 14 ವರ್ಷದ ಹಿಂದೆ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌ಗೆ ನಟಿಸಿ ನಿರ್ದೇಶಿಸಿದ ಚಿತ್ರ ಉಪೇಂದ್ರ. ಇದರಲ್ಲಿ ಮೂರು ನಾಯಕಿಯರು – ರವೀನಾ, ಪ್ರೇಮಾ ಮತ್ತು ಹೊಸ ಪರಿಚಯ ಧಾಮಿನಿ. ಈ ಚಿತ್ರವು 100 ದಿನಗಳ ಪ್ರದರ್ಶನವನ್ನು ಕಂಡಿತ್ತು.

ಇದೀಗ ಉಪೇಂದ್ರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ. ಕಳೆದ ವರ್ಷದ ಉಪೇಂದ್ರ ಬರ್ತಡೇನಲ್ಲಿ ಉಪೇಂದ್ರ-2 ಮಾಡುವ ಹಂಬಲ ವ್ಯಕ್ತಪಡಿಸಿದ ಉಪ್ಪಿ, ಅವರ ಹೆಂಡತಿ ಪ್ರಿಯಾಂಕ ಉಪೇಂದ್ರರ ಹೆಸರಿನ ಹೊಸ ಬ್ಯಾನರ್‌ನ್ನು ಅಂದು ಉದ್ಘಾಟಿಸಿದ್ದು, ಆ ಬ್ಯಾನರಿನಡಿಯಲ್ಲಿ ಉಪೇಂದ್ರ-2 ಚಿತ್ರವನ್ನು ತೆಗೆಯುವ ಆಶಯ ವ್ಯಕ್ತಪಡಿಸಿದ್ದರು. ಇದೀಗ ಆ ಚಿತ್ರಕ್ಕೆ “ಉಪ್ಪಿ-2” ಎನ್ನುವ ಹೆಸರನ್ನು ಕೊಡಲಿದ್ದಾರೆಂಬ ಸುದ್ದಿ ಹರಡಿದೆ. ಇದು ಉಪೇಂದ್ರ ಚಿತ್ರದ ಮುಂದಿನ ಭಾಗವಾಗಿರದೆ, ಹೊಸ ಕಥೆಯೊಂದಿಗೆ ಚಿತ್ರವನ್ನು ಮಾಡಲಿದ್ದಾರಂತೆ.

Upendra 2 film poster

Upendra 2 film poster

14ವರ್ಷದ ಹಿಂದಿನ ಉಪೇಂದ್ರ ಚಿತ್ರಕ್ಕೆ ಹಿಟ್ ಸಂಗೀತ ಕೊಟ್ಟ ಗುರುಕಿರಣ್, ಈ ಚಿತ್ರಕ್ಕೂ ಅವರದೇ ಸಂಗೀತವಿರುತ್ತದೆ. ಉಪೇಂದ್ರ ಸ್ವತಃ ತಾವೇ ಕಥೆ, ಚಿತ್ರಕಥೆ, ಡೈಲಾಗ್ ಜೊತೆಗೆ ನಿರ್ದೇಶನ ಮಾಡಲಿದ್ದಾರೆ. ಉಪೇಂದ್ರರ ಪತ್ನಿ ಈ ಚಿತ್ರವನ್ನು ಕಳೆದ ಉಪೇಂದ್ರರ ಹುಟ್ಟುಹಬ್ಬದ ದಿನದಂದು ಪ್ರಕಟಿಸಿದ್ದು, ಮುಂದಿನ 2013ರ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

ಇದೀಗ ಉಪೇಂದ್ರರ ಒಂದೇ ಒಂದು ಚಿತ್ರ ಟೋಪಿವಾಲಾ ತೆರೆಕಾಣಬೇಕಿದ್ದು, ಕಳೆದ ವರ್ಷ ಅವರ ಸಾಕಷ್ಟು ಚಿತ್ರಗಳು ಗಾಡ್‌ಫಾದರ್, ಕಲ್ಪನ, ಆರಕ್ಷಕ ಮತ್ತು ಕಠಾರಿ ವೀರ ಸುರಸುಂದರಾಗ್ನಿ ಬಿಡುಗಡೆ ಕಂಡಿವೆ.

ಉಪ್ಪಿಟ್ಟು ಅಂದರೆ ಎಲ್ಲರ ಬಾಯಲ್ಲಿ ನೀರುಬರುವಂತೆ, ಉಪಿ-2 ಕೂಡ ಎಲ್ಲರ ನಿರೀಕ್ಷೆಯಲ್ಲಿದೆ…..

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech