Close X

ಕನ್ನಡದ “Big Boss”ಗೆ ಕಿಚ್ಚ ಸುದೀಪ್‍ನ ನಿರೂಪಕ !

ಕನ್ನಡದ “ಬಿಗ್ ಬಾಸ್” ಕಾರ್ಯಕ್ರಮಮದ ನಿರೂಪಣೆಯನ್ನು ಯಾರು ಮಾಡುವರು ಎನ್ನುವ ವಿಷಯಕ್ಕೆ ಈಗ ತೆರೆ ಬಿದ್ದಿದ್ದೆ. ಕಲರ್ಸ್ ನಲ್ಲಿ ಬಿತ್ತರಗೊಳ್ಳುತ್ತಿರುವ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ “Big Boss”ನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈtv ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಮೊದಲ ಅವತರಣಿಕೆಯಲ್ಲಿ ದೊಡ್ಡ ಸೆಲೆಬ್ರಿಟಿಗಳಾದ ರಾಜಕಾರಣಿ ಸಿದ್ದಾರಾಮಯ್ಯ, ಕ್ರಿಕೆಟರ್ ರಾಬಿನ್ ಉತ್ತಪ್ಪ, ನಟಿ ಪ್ರಿಯಾಮಣಿ, ನಟ ಶ್ರೀಮುರಳಿ, ನಟಿ ರಾಧಿಕಾ ಪಂಡಿತ್ ಪಾಲ್ಗೊಳ್ಳಬಹುದೆಂದು ತಿಳಿದುಬಂದಿದೆ.

Kichcha Sudeep to host Big Boss in Kannadaಇದಕ್ಕೆಂದೆ ಪುಣೆಯ ಲೋನಾವಾಲಾದಲ್ಲಿ ಸ್ಪೆಷಲ್ ಮನೆಯನ್ನು ನಿರೂಪಿಸಿದ್ದು, ಆಯ್ಕೆಯಾದವರು ಮೂರು ತಿಂಗಳ ಕಠಿಣ ಪ್ರರಿಶ್ರಮವನ್ನು ವಹಿಸಬೇಕಾಗುತ್ತದೆ. ಇದು ಸ್ವಲ್ಪ ಕಠಿಣವೇ. ಸಿದ್ದರಾಮಯ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದು ಎಲೆಕ್ಷನ್‌ ಹತ್ತಿರವೇ ಇರುವುದರಿಂದ, ಮೂರು ತಿಂಗಳುಗಳ ಕಾಲ ರಾಜಕೀಯದಿಂದ ದೂರ ಉಳಿಯುವುದು ಕಷ್ಟ ಸಾಧ್ಯ. ಹಾಗೆಯೇ ನಟಿ ರಾಧಿಕಾ ಪಂಡಿತ್ ಕೂಡ, ಬಹಳಷ್ಟು ಚಿತ್ರಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ, ಇದು ಕಷ್ಟ. ಇವರಲ್ಲದೇ, ಯಾರಿಗಾದರೂ ಮೂರು ತಿಂಗಳುಗಳ ಕಾಲ ತಮ್ಮ ಸಹಜ ಕೆಲಸಗಳನ್ನು ಬಿಟ್ಟಿರಬೇಕೆಂದರೆ ಕಷ್ಟವೇ. ಯಾರ‍್ಯಾರು ಆಯ್ಕೆಯಾಗುತ್ತಾರೆಂದು ಕಾದು ನೋಡಬೇಕು.

ಹಿಂದಿಯ ಕಲರ್ಸ್‌ನಲ್ಲಿ ಮೂಡಿಬರುತ್ತಿರುವ “Big Boss” ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿರುವ ಸಲ್ಮಾನ್ ಖಾನ್‌ರ ಸಂಭಾವನೆ ಒಂದು ಎಪಿಸೋಡಿಗೆ ಬರೋಬ್ಬರಿ 4ಕೋಟಿ ತೆಗೆದುಕೊಳ್ಳುತ್ತಿದ್ದಾರೆಂಬುದು ಮೂಲಗಳಿಂದ ತಿಳಿದುಬಂದಿದೆ. ಕಿಚ್ಚ ಸುದೀಪ್‌ನ ಸಂಭಾವನೆಯನ್ನು ನಟನ ಮೂಲಗಳು ತಿಳಿಸದಿರಲು ಬಯಸಿದ್ದು, ಪ್ರತಿ ಎಪಿಸೋಡಿಗೆ 30 ರಿಂದ 60 ಲಕ್ಷದವರೆಗೆ ಪಡೆಯಬಹುದೆಂದು ಊಹಿಸಲಾಗಿದೆ.

CCL 2013ರ ನಂತರವೇ ಕಿಚ್ಚ ಸುದೀಪ್‌ನ ಡೇಟ್ಸ್ ಸಿಗಲು ಸಾಧುವಾಗುವುದು. ಈ ನಡುವೆ ಕಿಚ್ಚನ ಜೋಸ್ ಆಲೂಕಾಸ್‌ನ ಜಾಹೀರಾತು ಸಧ್ಯದಲ್ಲೇ ಟಿ.ವಿಗಳಲ್ಲಿ ಮೂಡಿಬರಲಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech