Close X

ಟ್ವೀಟ್ಸ್ ಮೂಲಕ ಕಮಲ್‌ಗೆ ಬೆಂಬಲವಿತ್ತ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ತಮ್ಮ ಬಚ್ಚನ್ ಚಿತ್ರದ ಹಾಡೊಂದರ ಶೂಟಿಂಗ್ ಮುಗಿಸಿ ಉಳಿದ ಮತ್ತೊಂದು ಹಾಡಿನ ಶೂಟಿಂಗ್ ಮಾಡಲು ಮಸ್ಕಟ್‌ಗೆ ತೆರಳಿದ್ದಾರೆ. ಮಸ್ಕಟ್‌ನಲ್ಲಿ ಈ ಹಾಡಿನಲ್ಲಿ ಸುದೀಪ್ ಜೊತೆ ಭಾವನ ಕೂಡ ಹೆಜ್ಜೆ ಹಾಕಲಿದ್ದಾರೆ. ಅವರು ಟ್ವಿಟ್ಟರ್ ಮೂಲಕ ಮಸ್ಕಟ್‌ನ ಸ್ವಚ್ಛತೆ ಮತ್ತು ಅಲ್ಲಿನ ಜನರ ಶಿಸ್ತಿನ ಬಗ್ಗೆ ಹೊಗಳಿದ್ದಾರೆ.

ವಿಶ್ವರೂಪಂ ಚಿತ್ರದ ಬಗ್ಗೆ ಎದ್ದಿರುವ ಗಲಭೆಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಈ ತರ ದೊಡ್ಡ ಮೇರು ನಟ ಕಮಲ್‌ಗೆ ನಡೆದಿದೆ ಎಂದರೆ, ನಮ್ಮಂತಹ ಸಾಮಾನ್ಯ ಜನರಿಗೆ ಇದು ದೂರವೇನಿಲ್ಲ. ನಮ್ಮ ದೇಶದ ಈ ರೀತಿ ರೂಪುಗೊಂಡಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಚಿತ್ರವನ್ನು ಬ್ಯಾನ್ ಮಾಡಲೇಬೇಕೆಂದರೆ, ನಮ್ಮ ಸಂಸ್ಕೃತಿಗೆ ವಿರುದ್ದವಾದ ಬೇಕಾದಷ್ಟು ಹಾಲಿವುಡ್ ಮತ್ತು ಸ್ವದೇಶಿ ಚಿತ್ರಗಳಿವೆ. ಅವುಗಳನ್ನು ಏಕೆ ನೀವು ಬ್ಯಾನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ ?

ಕ್ಷುಲ್ಲಕ ಕಾರಣದಿಂದ ವಿಶ್ವರೂಪಂ ಚಿತ್ರವನ್ನು ಬ್ಯಾನ್ ಮಾಡುವ ಮೂಲಕ ನಮ್ಮ ದೇಶಕ್ಕೆ ಕೀರ್ತಿ ತಂದಿರುವ ಮೇರು ಪ್ರತಿಭಾವಂತ ಕಮಲ್‌ನನ್ನು ಅವಮಾನಿಸಲಾಗಿದೆ.

“ಒಬ್ಬ ನಟನಾಗಿ ನಾನು ಸತ್ತ ಮೇಲೆ ನನ್ನ ಮೂರ್ತಿಗೆ ಗೌರವ ಸಿಗುವುದಕ್ಕಿಂತ ನಾನು ಬದುಕಿರುವಾಗಲೇ ನನಗೆ ಗೌರವ ಸಿಕ್ಕುವುದು ಒಳ್ಳೆಯದೆಂದು ಅನ್ನಿಸುತ್ತದೆ. ಕಮಲ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಮತ್ತು ನನಗೆ ವಿಶ್ವಾಸವಿದೆ ಭಾರತೀಯರು ಕಮಲ್ ಜೊತೆಗಿದ್ದಾರೆ” ಎನ್ನುತ್ತಾರೆ ಕಿಚ್ಚಸುದೀಪ್.

ಕಿಚ್ಚ ಸುದೀಪ್ ಟ್ವೀಟ್ಸ್ ಈ ಕೆಳಗೆ :

KicchaSudeep Tweets

KicchaSudeep Tweets

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech