Close X

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಹಾಡುಗಳು……..

ಪ್ರಪ್ರಥಮ ಬಾರಿಗೆ ನಿರ್ದೇಶನಕ್ಕಿಳಿದಿರುವ ಸುನಿ ತಮ್ಮ “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ” ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗೇ ಮಾಡಿದ್ದಾರೆ. ಇದಕ್ಕೆಂದೆ ತ್ರಿಭುವನ್ ಥಿಯೇಟರಿನ ಸಂಜೆಯ ಎರಡು ಶೋಗಳನ್ನು ರದ್ದುಗೊಳಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರೇಡಿಯೋ ಜಾಕಿಗಳಾದ ಪ್ರದೀಪ್, ನೇತ್ರ, ಸೌಜನ್ಯ ಮತ್ತು ರಚನ ಪಾಲ್ಗೊಂಡಿದ್ದರು.

Simple Aagond Love Story Audio Releaseಎಂ. ಎಲ್. ಎ ನೆ. ಲ. ನರೇಂದ್ರಬಾಬು, ಎಂ. ಎಲ್. ಸಿ ಈ ಕೃಷ್ಣಪ್ಪ, ಈ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿರುವ ಶ್ರೀನಗರ ಕಿಟ್ಟಿ, ನಟಿ ಮೇಘನ ಗಾಂವ್ಕರ್ ಮತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ” ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

ಭರತ್ ಚಿತ್ರದ ಸುಮಧುರ ಸಂಗೀತ ನಿರ್ದೇಶಕ. ಈ ಕಾರ್ಯಕ್ರಮದಲ್ಲಿ ಎರಡು ಹಾಡುನ್ನು ಮತ್ತು ಚಿತ್ರದ ಅಧಿಕೃತ ಟ್ರೈಲರ್‌ನ್ನು ಪ್ರೇಕ್ಷಕರಿಗೆ ತೋರಿಸಲಾಯಿತು. ಇದನ್ನು ಹೊರತು ಪಡಿಸಿ ಮತ್ತೊಂದು ಹಾಡನ್ನು ಅಲ್ಲೇ ಯುವ ಗಾಯಕಿ ಪ್ರಿಯಾಂಕರ ಹಾಡಿದರು. ಜೇಂಕಾರ್ ಆಡಿಯೋ ಚಿತ್ರದ ಧ್ವನಿಸುರಳಿಯನ್ನು ಮಾರುಕಟ್ಟೆಗೆ ವಿತರಿಸುತ್ತಿದ್ದಾರೆ.

ನಿರ್ದೇಶಕ ಸುನಿ ಪ್ರಕಾರ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳು. ಅವುಗಳಲ್ಲಿ ಒಂದು ರಕ್ಷಿತ್ ಶೆಟ್ಟಿ ಮತ್ತೊಂದು ಶ್ವೇತಾ ಶ್ರೀವಾತ್ಸವ್. ಇವರಿಬ್ಬರು ಶೇ. 90ರಷ್ಟು ಚಿತ್ರದಲ್ಲಿ ಕಾಳಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲು ಮತ್ತು ಕೊನೆಯಲ್ಲಿ RJ ರಚನ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ಹೈಲೈಟ್. ಚಿತ್ರದ ಉಳಿದ ಪಾತ್ರಗಳ ಸಂಖ್ಯೆ 8 ಎನ್ನುತ್ತಾರೆ ಸುನಿ. ಸುನಿ ಈ ಚಿತ್ರವನ್ನು ಮೂರು ಕಾಲಗಳಲ್ಲಿ ಶೂಟಿಂಗ್ ನಡೆಸಿದ್ದಾರೆ – ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲಗಳಲ್ಲಿ ಶೂಟಿಂಗ್ ಮಾಡಿದ್ದಾರೆ.

ನಿಮ್ಮ ಕಿವಿಗಳಿಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಇಂಪಾದ ಹಾಡುಗಳು :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech