Close X

ಮಾಲಾಶ್ರೀ, ವಿಜಯ್ ಶಾಂತಿಯವರ ಸಾಲಿಗೆ ಸೇರಲಿರುವ ಪ್ರಿಯಾಮಣಿ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಪ್ರಿಯಾಮಣಿ ಇದೀಗ ಸಂಪೂರ್ಣ ಸಾಹಸ ಚಿತ್ರವೊಂದನ್ನು ಮಾಡಲು ಮುಂದಾಗಿದ್ದಾರೆ. ಕೆ. ಮಂಜುರ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರವನ್ನು ಆನಂದ್. ಪಿ. ರಾಜ್ ನಿರ್ದೇಶಿಸಲಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಕೆಲವೇ ದಿನಗಳಲ್ಲಿ ನಿರ್ದರಿಸಲಾಗುವುದೆಂದು ಆನಂದ್ ತಿಳಿಸಿದ್ದಾರೆ.

“ರಾಗಿಣಿ IPS ಚಿತ್ರಕ್ಕೆ ರಾಗಿಣಿಯವರನ್ನೊಳಗೊಂಡ ಐಟಂ ಹಾಡೊಂದರ ಚಿತ್ರೀಕರಣವು ಬಾಕಿಯಿದ್ದು, ಈ ತಿಂಗಳ ಕೊನೆಯಲ್ಲಿ ಅದನ್ನು ಮುಗಿಸಿ ನಂತರ ಪ್ರಿಯಾಮಣಿಯವರ ಚಿತ್ರವನ್ನು ಕೈಗೆತ್ತಿಕೊಳ್ಳಲಾಗುವುದು” ಎಂದರು ಆನಂದ್.

Priyamani action movie“ರಾಗಿಣಿ IPS ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವು ಮುಗಿದಿದ್ದು, ಉಳಿದ ಕೆಲಸಗಳು ಫೆಬ್ರವರಿ ತಿಂಗಳ ಮಧ್ಯದೊಳಗೆ ಪೂರ್ತಿಯಾಗಲಿದೆ. ಕೆ. ಮಂಜು ಸರ್ ಉತ್ತಮವಾಗಿ ಮೂಡಿಬಂದಿರುವ ರಾಗಿಣಿ IPS ಚಿತ್ರಕ್ಕೆ ಉತ್ತಮ ಚಿತ್ರಮಂದಿರಗಳನ್ನು ಕಂಡುಕೊಳ್ಳುವರೆಂದು ನಂಬಿದ್ದೇನೆ” ಎಂದರು ಆನಂದ್.

ದಕ್ಷಿಣ ಭಾರತದಲ್ಲಿ ಪ್ರಿಯಾಮಣಿ ತುಂಬಾ ಜನಪ್ರಿಯಳಾಗಿರುವುದರಿಂದ, ಈ ಚಿತ್ರವನ್ನು ಮುಂದೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುವುದೆಂದು ತಿಳಿದುಬಂದಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech