Close X

ಪ್ರೇಮಿಗಳಿಗಾಗಿ ಪ್ರೇಮಿಗಳ ದಿನದಂದು ಮೈನಾ

ನಾಗಶೇಖರ್ ನಿರ್ದೇಶನದ, ಚೇತನ್ ಮತ್ತು ನಿತ್ಯಾ ಮೆನನ್ ಮುಖ್ಯಭೂಮಿಕೆಯ “ಮೈನಾ” ಚಿತ್ರವು ಪ್ರೇಮಿಗಳ ದಿನ “Feb 14″ಕ್ಕೆ ಬಿಡುಗಡೆ ಕಾಣಲಿದೆ. ಸ್ವತಃ ನಾಗಶೇಖರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

“ಈ ಮೊದಲು ಜನವರಿ 25ಕ್ಕೆ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದ್ದೇವು. ಆದರೆ, ಥಿಯೇಟರುಗಳ ಆಯ್ಕೆಯ ಕಾರಣ ಚಿತ್ರದ ರಿಲೀಸ್‌ನ್ನು ಮುಂದೂಡಲಾಗಿದೆ. ಮೈನಾ ಚಿತ್ರವು ಮಲ್ಟಿಫೆಕ್ಸ್ ಮತ್ತು ಏಕ ತೆರೆಯ ಚಿತ್ರಮಂದಿರ ಎರಡರಲ್ಲೂ ಪ್ರದರ್ಶನಗೊಳ್ಳುವಂತಹ ಚಿತ್ರವಾಗಿದೆ. ಆದ್ದರಿಂದ ಉತ್ತಮ ಥಿಯೇಟರುಗಳ ಆಯ್ಕೆಯಲ್ಲಿ ವಿಳಂಬವಾಗಿದೆ. ಚಿತ್ರದ ತಯಾರಿಕೆಯ ಶ್ರಮವನ್ನು ಸರಿಯಾದ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ” ಎಂದಿದ್ದಾರೆ ನಿರ್ದೇಶಕ ನಾಗಶೇಖರ್.

Mynaa Movie releaseನಿರ್ಮಾಪಕರಿಗೆ ಧನ್ಯವಾದಗಳನ್ನು ತಿಳಿಸುತ್ತ ನಾಗಶೇಖರ್ “ಚಿತ್ರಕ್ಕೆ ಬೇಕಾದ ಎಲ್ಲವನ್ನು ಸಕಾಲದಲ್ಲಿ ಒದಗಿಸಿದ್ದು, ಈ ಚಿತ್ರ ಇತರ ಭಾಷೆಗಳಲ್ಲಿ ಡಬ್ಬಿಂಗ್ ಆಗಲಿದ್ದು, ಅದೂ ಕೂಡ ದೊಡ್ಡ ಹಿಟ್ ಆಗಲಿದೆ” ಎಂದರು ನಾಗಶೇಖರ್.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech