Close X

ಜನವರಿ 25ಕ್ಕೆ “ಮುಕ್ತ ಮುಕ್ತ” ಮುಕ್ತಿಯನ್ನು ಪಡೆಯುತ್ತಿದೆ

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ…

ಈ ಹಾಡು ಯಾರಿಗೆ ತಾನೆ ಪರಿಚಿತವಿಲ್ಲದಿರುವುದು ? ಕವಿ ಎಚ್.ಎಸ್. ವೆಂಕಟೇಶಮೂರ್ತಿ ಬರೆದಿರುವ ಈ ಸಾಲುಗಳು, ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಿ. ಎನ್. ಸೀತಾರಾಂ ರವರ ಮುಕ್ತ ಮುಕ್ತ ದಾರಾವಾಹಿಯ ಹಾಡು. ಈ ಬೃಹತ್ ದಾರಾವಾಹಿ “ಮುಕ್ತ ಮುಕ್ತ” ಈಗ ಕೊನೆಯ ಘಟ್ಟದಲ್ಲಿದೆ. ಇದೇ ಇಪ್ಪತ್ತೈದರಂದು(25th Jan 2013) ಅದರ ಕೊನೆಯ ಕಂತು ಪ್ರದರ್ಶನವಾಗಲಿದೆ. ಈ ಮೊದಲು 300ಕಂತಿನ ದಾರಾವಾಹಿ ಎಂದುಕೊಂಡಿದ್ದ ಕಥೆ, ಈಗ 1200 ಕಂತುಗಳವರೆಗೆ ಬಂದಿದೆ.

Mukhta Muktha serial ends on Jan 25thಕೆಲವು ವೀಕ್ಷಕರು ಅಯ್ಯೋ ಯಾವಾಗ ಈ ಮುಕ್ತ ಮುಕ್ತ ಮುಗಿಯುತ್ತೇ ಎಂದು ಬೇಸರ ವ್ಯಕ್ತಪಡಿಸುತ್ತಿರುವ ಬೆನ್ನೆಲೆ ಅವರಿಗೆ ಸಂತಸ ಸುದ್ದಿಯನ್ನು ಸೀತಾರಾಂ ಹೊರತಂದಿದ್ದಾರೆ. ಇದರಲ್ಲಿ ಇನ್ನೊಂದು ಸಿಹಿ ಸುದ್ದಿಕೂಡ ತುಂಬಿದೆ. ಅದೇನೆಂದರೆ, ಈ ದಾರಾವಾಹಿಯು ಮುಗಿದ ನಂತರ ಸೀತಾರಾಂ ಹೊಸ ಸಿನಿಮಾವೊಂದನ್ನು ಮಾಡಲಿದ್ದಾರೆ. ಎಲ್ಲಾ ನಿರೀಕ್ಷೆಯಂತೆ ನಡೆದರೆ, ತ್ರಿವೇಣಿ ಅಥವಾ ವಿ. ಎಂ. ಇನಾಂದಾರ್‌ರವರ ಕಾದಂಬರಿ, ಇಲ್ಲವೇ ಸಮಕಾಲಿನ ಬರಹಗಾರರ ಕೃತಿಯೊಂದನ್ನು ಅಥವಾ ಅವರದೇ ಕಥೆಯೊಂದನ್ನು ಸಿನಿಮಾ ಮಾಡಲಿದ್ದಾರೆ. ವಿಶೇಷವೆಂದರೆ, ಅವರ ದಾರಾವಾಹಿಗಳಲ್ಲಿ, ಕೋರ್ಟ್ ದೃಶ್ಯಗಳು ಹೆಚ್ಚು ಜನರನ್ನು ಆಕರ್ಷಿಸಿದ್ದವು. ಅದೀಗ ಹಿರಿತೆರೆಯಲ್ಲೂ ಕಾಣಬಹುದು. ಪರೇಶ್ ರಾವಲ್‌ರ “ಓ ಮೈ ಗಾಡ್” ಚಿತ್ರದಂತೆ !!! ಈ ಹಿಂದೆ “ಮೀರಾ ಮಾಧವ ರಾಘವ”, “ಮತದಾನ” ಚಿತ್ರಗಳನ್ನು ಮಾಡಿದ್ದ ಟಿ. ಎನ್. ಸೀತಾರಾಂಗೆ ಮತ್ತೊಂದು ಸಿನಿಮಾ ಮಾಡುವುದು ಅಷ್ಟೇನು ಕಷ್ಟವಲ್ಲ.

“ಮುಕ್ತ ಮುಕ್ತ”ದ ದಾರಾವಾಹಿಯ ಕಥೆ ಮುಗಿದಿರಬಹುದು, ಆದರೆ ಅವರ ಬಳಿ ಕಥೆಯ ದೊಡ್ಡ ಗೊಂಚಲವೇ ಇದೆ. ಹಾಗಾಗಿ ಮತ್ತೊಂದು ಹೊಸ ದಾರಾವಾಹಿಯನ್ನು ಅಪೇಕ್ಷೆ ಪಡುತ್ತಿರುವ ಕಿರುತೆರೆ ವೀಕ್ಷಕರು, ಇನ್ನೂ ಕೆಲ ಕಾಲ ಕಾಯಬೇಕಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech