Close X

ವರ್ಷದ ಅದ್ದೂರಿ ಬಿಡುಗಡೆ ಕಾಣುತ್ತಿರುವ ಚಿತ್ರ “ಲಕ್ಷ್ಮೀ”

ಎರಡು ವರ್ಷ 15 ದಿನಗಳನ್ನು ತೆಗೆದುಕೊಂಡ ಸೆಂಚುರಿ ಸ್ಟಾರ್ ಶಿವಣ್ಣನ “ಲಕ್ಷ್ಮೀ” ಚಿತ್ರ ಇಂದು ಶುಕ್ರವಾರ ಜನವರಿ 18ರಂದು ಬಿಡುಗಡೆಯಾಗುತ್ತಿದೆ. ಭರಣಿ ಮಿನೆರೆಲ್ಸ್ ಈ ಚಿತ್ರವನ್ನು ತಯಾರಿಸುತ್ತಿದ್ದು, ಇದು ಅವರ ಎರಡನೇ ಚಿತ್ರವಾಗಿದೆ. ಶಿವರಾಜ್‌ಕುಮಾರ್ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಒಂದು ಗಂಟೆಗೂ ಹೆಚ್ಚಿನ ಗ್ರಾಫಿಕ್ಸ್‌ನ್ನು ಬಳಸಲಾಗಿದೆ. ಲಕ್ಷ್ಮೀ ಚಿತ್ರವನ್ನು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸುತ್ತಿದ್ದು, ಇನ್ನೂ ಹಲವು ಚಿತ್ರಮಂದಿರದ ಮಾಲೀಕರು, ತಮ್ಮ ಚಿತ್ರಮಂದಿರದಲ್ಲೂ ರಿಲೀಸ್ ಮಾಡುವಂತೆ ಡಿಸ್ಟ್ರಿಬ್ಯೂಟರ್ ಬಾಷಾರವರನ್ನು ಮನವಿ ಮಾಡಿಕೊಂಡಿದ್ದಾರೆ.

Lakshmi movie releaseಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳು, ಲಕ್ಷ್ಮೀ ಚಿತ್ರವನ್ನು ಬರಮಾಡಿಕೊಳ್ಳಲು ತಮ್ಮದೇ ಆದ ವಿಭಿನ್ನ ರೀತಿಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ನಿನ್ನೆ ಗುರುವಾರ, ಕಪಾಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳೆಲ್ಲಾ ಸೇರಿದ್ದು, ಚಿತ್ರದ ಬುಕಿಂಗ್ ಆರಂಭಿಸುವ ಮೊದಲು, ಶಿವಣ್ಣರ ಕಟ್ ಔಟ್‌ಗೆ ಹಾಲಿನ ಅಭಿಷೇಕ ನಡೆಸಲಾಯಿತು. ಇಂದು ಶುಕ್ರವಾರ 102 ಅಡಿ ಹೂವಿನ ಹಾರವನ್ನು ಶಿವಣ್ಣರ ಕಟ್ ಔಟ್‌ಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 102ಅಡಿ ಹೂವಿನ ಹಾರ ಅವರ 102ನೇ ಚಿತ್ರವನ್ನು ಸೂಚಿಸುತ್ತದೆ. ಭಾನುವಾರ ಸಂಜೆ, ಸಾವಿರಾರು ಅಭಿಮಾನಿಗಳ ಜೊತೆ ಶಿವರಾಜ್‌ಕುಮಾರ್ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಕಪಾಲಿ ಥಿಯೇಟರಿನವರೆಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೈಸೂರಿನಲ್ಲಿ ಜ್ವಾಲಾಮುಖಿ ಶಿವರಾಜ್‌ಕುಮಾರ್ ಅಭಿಮಾನಿಗಳು ಹೂವಿನ ಅಲಂಕಾರ ಮತ್ತು ಮರೆವಣಿಗೆಯನ್ನು ಪ್ರಭಾ ಥಿಯೇಟರಿನಲ್ಲಿ ಹಮ್ಮಿಕೊಂಡಿದ್ದಾರೆ.

“ಲಕ್ಷ್ಮೀ” ಚಿತ್ರವನ್ನು ಕರ್ನಾಟಕ, ಬ್ಯಾಂಕಾಕ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಚಿತ್ರ ಗೆಲ್ಲಲ್ಲು ಪ್ಲಸ್ ಪಾಯಿಂಟ್ ಆಗಿದೆ. ಖಂಡಿತವಾಗಿ ಲಕ್ಷ್ಮೀ ಚಿತ್ರವು 2013ರ ಹಿಟ್ ಚಿತ್ರವಾಗಲಿದೆ. ಶಿವರಾಜ್‌ಕುಮಾರ್ ಜೊತೆ ರಾಘವ ಲೋಕಿಯ ಎರಡನೇ ಚಿತ್ರವಾಗಿದ್ದು, ಗುರುಕಿರಣ್‌ರ ಸಂಗೀತ ಚಿತ್ರಕ್ಕಿದೆ.

ಚಂದ್ರಶೇಖರ್ ಕೆ. ಎಸ್ ರ ಕ್ಯಾಮೆರಾ ಕೈಚಳಕ, ಬಾಬು ಮತ್ತು ಸಾನಿಯಾರ ಮೇಕ್ಅಪ್, ಸಹಾಯಕ ನಿರ್ದೇಶಕರಾಗಿ ಆನಂದ್ ಪ್ರಿಯಾ, ಎಂ. ಎಸ್. ರಮೇಶ್‌ರ ಸಂಭಾಷಣೆ, ಥ್ರಿಲ್ಲರ್ ಮಂಜುರ ಸಾಹಸ, ಪ್ರದೀಪ್ ಆಂಥೋನಿಯ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ರಂಗಾಯಣ ರಘು, ಆಶಿಶ್ ವಿದ್ಯಾರ್ಥಿ, ರವಿ ಕಾಳೆ, ಕೋಮಲ್ ಕುಮಾರ್‌ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech