Close X

ಚಾರ್ಮಿನಾರ್ ಚಂದ್ರುಗೆ ಡಬಲ್ ಖುಷಿ !

ಚಾರ್ಮಿನಾರ್ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಆರ್. ಚಂದ್ರು ಈಗ ಡಬಲ್ ಖುಷಿಯಲ್ಲಿದ್ದಾರೆ. ತೆಲುಗು ಫಿಲ್ಮ್ ಇಂಡಸ್ಟೀಯಾ ಪ್ರಖ್ಯಾತ ನಿರ್ಮಾಪಕ ಲಗತಪತಿ ಶ್ರೀಧರ್ ಹೊಸದೊಂದು ಪ್ರಕಟಣೆಯನ್ನು ಕೊಟ್ಟಿದ್ದಾರೆ. ಅದೇನೆಂದರೆ, ಆರ್. ಚಂದ್ರುರ ಚಾರ್ಮಿನಾರ್ ಚಿತ್ರದ ತೆಲುಗು ರೀಮೇಕ್ ಹಕ್ಕನ್ನು ಪಡೆಯಲಿದ್ದಾರಂತೆ. ಹಾಗೂ ಮತ್ತೊಂದು ಖುಷಿಯೆಂದರೆ, ತೆಲುಗು ರೀಮೇಕ್ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸಿದ ಆರ್. ಚಂದ್ರುರವರೆ ನಿರ್ದೇಶಿಸಲಿದ್ದಾರಂತೆ.

Charminar Director Chandru on Double Happinessಇದು ಆರ್. ಚಂದ್ರುರಿಗೆ ಡಬಲ್ ಖುಷಿತಂದಿದೆ. ರೀಮೇಕ್ ಹಕ್ಕನ್ನಿಂದ ಹಣಕಾಸಿನ ಪರಿಹಾರ ಪಡೆಯುವ ಜೊತೆಗೆ ಆರ್. ಚಂದ್ರು ತೆಲುಗಿನಲ್ಲಿ ಕೂಡ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ನಾಗ ಚೈತನ್ಯ ನಾಯಕನಾಗಿ ನಟಿಸಲಿದ್ದಾರಂತೆ.

ಲಗಪತಿ ಶ್ರೀಧರ್ ಪತಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, “ನಾನು ಆರ್. ಚಂದ್ರುರ ಚಿತ್ರಗಳನ್ನು ನೋಡಿದ್ದೇನೆ. ಅವರು ಭಾವೋದ್ರಿಕ್ತ ಮತ್ತು ಕಾರ್ಯಸಾಧಕ ನಿರ್ದೇಶಕ. ಚಾರ್ಮಿನಾರ್ ಚಿತ್ರದ ವಿಷಯ ಸಾರ್ವತ್ರಿಕವಾದದ್ದು. ಇನ್ನೊಂದು ಸಂತಸದ ವಿಷಯವೆಂದರೆ, ಈ ಚಿತ್ರವನ್ನು ಹಿಂದಿಯಲ್ಲೂ ರೀಮೇಕ್ ಮಾಡುವ ಯೋಚನೆಯಲಿದ್ದೇನೆ” ಎಂದರು.

ಚಾರ್ಮಿನಾರ್ ಚಿತ್ರವು ಫೆಬ್ರವರಿ 8ಕ್ಕೆ ಬಿಡುಗಡೆಗೊಳ್ಳಲು ಎಲ್ಲಾ ಸಕಲ ಸಿದ್ದತೆಗಳು ನಡೆದಿದ್ದು, ಮರುದಿನವೇ ತೆಲುಗು ರೀಮೇಕ್ ಚಿತ್ರದ ಮುಹೂರ್ತ ಸಮಾರಂಭವನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech