Close X

ಚಾಲೆಂಜಿಂಗೆ ಸ್ಟಾರ್ ದರ್ಶನ್ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ

ಚಾಲೆಂಜಿಂಗೆ ಸ್ಟಾರ್ ದರ್ಶನ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ರಿಕೆಟ್ ಅಭ್ಯಾಸಕ್ಕೆ ಸೇರಿಕೊಂಡಿದ್ದಾರೆ. ತಮ್ಮ ಸ್ನೇಹಿತ ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ತಂಡವನ್ನು ಹುರಿದುಂಬಿಸಲು ದರ್ಶನ್ ತಂಡಕ್ಕೆ ಸೇರಿಕೊಂಡಿದ್ದಾರೆ. ಸಪೋಟಾ ಗಾರ್ಡನ್‌ನಲ್ಲಿ ನಡೆಯುತ್ತಿರುವ ಈ ಅಭ್ಯಾಸದಲ್ಲಿ, ಚಿರಂಜೀವಿ ಸರ್ಜಾ, ಪ್ರವೀಣ್, ರಾಜೀವ್, ಭಾಸ್ಕರ್, ತರುಣ್, ತರುಣ್ ಸುಧೀರ್ ಮುಂತಾದವರೂ ಪಾಲ್ಗೊಂಡಿದ್ದಾರೆ. ಬುಲ್ ಬುಲ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ, ದರ್ಶನ್ ಈಗ ಆ ಚಿತ್ರದ ಎಲ್ಲಾ ಶೂಟಿಂಗ್‌ನ್ನು ಮುಗಿಸಿ ಬಂದಿದ್ದಾರೆ.

CCL-3 Karnataka Bulldozers darshan sudeepCCL season 3ಯು ಕೊಚ್ಚಿಯಲ್ಲಿ ಇದೇ ಫೆಬ್ರವರಿ 9ರಿಂದ ಶುರುವಾಗಲಿದ್ದು, ಕೇರಳ ಸ್ಟ್ರೈಕರ್ಸ್ ಮೊಟ್ಟ ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ನೊಂದಿಗೆ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೆಣಸಲಿದೆ. ಕರ್ನಾಟಕ ಬುಲ್ಡೋಜರ್ಸ್, ತನ್ನ ಬದ್ದ ವೈರಿ ಚಾಂಪಿಯನ್ ಚೆನೈ ರೈನೋಸ್‌ನೊಂದಿಗೆ ಸೆಣಸಲಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech