Close X

ದರ್ಶನ್ ಅತಿಶೀಘ್ರದಲ್ಲಿ ಪೋಲೀಸ್ ಖಾಕಿಯಲ್ಲಿ ಕಾಣಿಸಿಕೊಳ್ಲಲಿದ್ದಾರೆ

ತುಂಬಾ ದಿನಗಳ ನಂತರ ಛಾಲೇಂಜಿಂಗ್ ಸ್ಟಾರ್ ದರ್ಶನ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸಲಿರುವ ಚಿತ್ರದಲ್ಲಿ ಛಾಲೇಂಜಿಂಗ್ ಸ್ಟಾರ್ ದರ್ಶನ್ ಖಾಖಿಯನ್ನು ತೊಡಲಿದ್ದಾರಂತೆ. ಈ ಚಿತ್ರವು ಈಗಿರುವ ದರ್ಶನ್ ಕಮಿಟ್‌ಮೆಂಟುಗಳು ಮುಗಿದ ಬಳಿಕ ಶುರುವಾಗಲಿದೆಯಂತೆ. ಸದ್ಯಕ್ಕೆ ದರ್ಶನ್, ಅಂಬರೀಷ್‌ರೊಂದಿಗೆ ಬುಲ್ ಬುಲ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಂತರ ತೆಲುಗಿನ ಬೃಂದಾವನಂ ಚಿತ್ರವನ್ನು ಕನ್ನಡದಲ್ಲಿ ಬೃಂದಾವನ ಚಿತ್ರವಾಗಿ ರೀಮೇಕ್ ಆಗಲಿದ್ದು, ಆ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ತದನಂತರ ಅವರ ವಿರಾಟ್ ಚಿತ್ರದ ಶೂಟಿಂಗ್ ನಡೆಯಲಿದೆ. ಈ ಎಲ್ಲಾ ಚಿತ್ರದ ಶೂಟಿಂಗ್ ಮುಗಿದ ಮೇಲೆ ಹೊಸ ಪ್ರಾಜೆಕ್ಟ್ ಶುರುವಾಗಲಿದೆ. ಚಿತ್ರಕ್ಕೆ ನಿರ್ದೇಶಕನ ಆಯ್ಕೆ ಇನ್ನೂ ಆಗಿಲ್ಲ, ಆದರೆ ಸ್ಕ್ರಿಪ್ಟ್ ಕೆಲಸ ಈಗಾಗಲೇ ಶುರುವಾಗಿದೆ ಎನ್ನುತ್ತಾರೆ ಸಂದೇಶ್.

Darshan in police dressಈ ಮೊದಲು ದರ್ಶನ್ ಸ್ನೇಹಿತರು ಚಿತ್ರದಲ್ಲಿ ಪೋಲೀಸ್ ಖಾಖಿಯೊಂದಿಗೆ ಚಿಕ್ಕ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದೇ ಈ ಹೊಸ ಪೋಲೀಸ್ ಪಾತ್ರದ ಚಿತ್ರಕ್ಕೆ ಮುಂದಾಗಿರುವುದು ಎನ್ನುತ್ತಾರೆ ದರ್ಶನ್. ಹಿಂದೆ ದರ್ಶನ್ ಖಾಕಿಯೊಂದಿಗೆ ಅಯ್ಯ ಚಿತ್ರದಲ್ಲಿ ದೊಡ್ಡ ಯಶಸ್ಸು ಪಡೆದಿದ್ದರು. ಸಂದೇಶ್ ನಾಗರಾಜ್ ಚಿತ್ರವೆಂದರೆ ದೊಡ್ಡ ಬಜೆಟ್ ಚಿತ್ರ. ಹಾಗಾಗಿಯೇ ದೊಡ್ಡ ಹೀರೋಯಿನ್‌ನ ಆಯ್ಕೆ ಆಗಲಿದೆ ಎನ್ನುತ್ತದೆ ಚಿತ್ರದ ಪ್ರೊಡಕ್ಷನ್ ಘಟಕ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech