Close X

ನಾಣಿ, ಮೋನಿ ಮತ್ತು ರಮ್ಮಿ ಈಗ ಚತ್ರಿಗಳು !

ಎಸ್. ನಾರಾಯಣ್‌ರ ಪದ್ಮ ಸುಂದರಿ ಕ್ರಿಯೇಷನ್ಸ್ ಮೂಲಕ ಬರುತ್ತಿರುವ ನಾರಾಯಣ್, ಮೋಹನ್ ಮತ್ತು ರಮೇಶ್ ತ್ರಿಮೂರ್ತಿಗಳಿಂದ ಕೂಡಿದ ಹೊಸ ಚಿತ್ರ ಚತ್ರಿಗಳು ಸಾರ್ ಚತ್ರಿಗಳು ಎಂದು ನಾಮಕರಿಸಲಾಗಿದೆ. ಈಗಿನ ಕಾಲಕ್ಕೆ ಈ ಟೈಟಲ್ಲ್ ಪರ್ಫೆಕಟ್ ಸೂಟ್ ಆಗುತ್ತೆ ಅಲ್ವಾ ? ಈ ಮೊದಲು ಚಿತ್ರದ ಟೈಟಲ್‌ನ್ನು ಸೂಚಿಸಲು ಪ್ರೇಕ್ಷಕರಿಗೆ ಕಂಟೆಸ್ಟ್ ಮೂಲಕ ಇಡಲಾಗಿತ್ತು. ಅದರ ವಿಜೇತರು ವಾದಿರಾಜ್. ಇವರಿಗೆ “ಹೀರೋ ಮೋಟರ್ ಬೈಕ್” ಮತ್ತು “ಗಣೇಶ್ ಆಭರಣ ಉಡುಗೊರೆ” ದೊರೆಯಲಿದೆ. 60000 ಸಾವಿರ ಜನರು ಈ ಒಂದು ಕಂಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದರು.

Chatrigalu Saar Chatrigalu Title

ಈ ಚಿತ್ರದ ಟೈಟಲ್‌ನ್ನು ಮೋಹನ್, ನಾರಾಯಣ್ ಮತ್ತು ರಮೇಶ್ ತಮ್ಮ ತಮ್ಮ ಕೋಟ್‌ಗಳ ಬಟನ್ ತೆರೆದಿಡುವ ಮೂಲಕ ಟೈಟಲ್‌ನ್ನು ಅನಾವರಣಗೊಳಿಸಲಾಯಿತು. ಇವರುಗಳ ಟೀ-ಶರ್ಟ್ಗಳ ಮೇಲೆ ಚಿತ್ರದ ಟೈಟಲ್‌ನ್ನು ವಿಂಗಡಿಸಲಾಗಿತ್ತು. ಮೋಹನ್ ಟೀ-ಶರ್ಟ್‌ನ ಮೇಲೆ ಚತ್ರಿಗಳು, ಎಸ್. ನಾರಾಯಣ್ ಟೀ-ಶರ್ಟ್ ಮೇಲೆ ಸಾರ್ ಮತ್ತು ರಮೇಶ್ ಅರವಿಂದ್ ಟೀ-ಶರ್ಟ್ ಮೇಲೆ ಮತ್ತೆ ಚತ್ರಿಗಳೆಂದು.

ಈ ತ್ರಿಮೂರ್ತಿಗಳಿಗೆ ನಾಲ್ಕು ಹೀರೋಯಿನ್‌ಗಳಂತೆ !

Four Heroines for Chatrigalu Saar Chatrigalu trio

ಮಾನಸಿ, ಸನಾತನಿ, ಪವಿತ್ರ ಗೌಡ ಮತ್ತು ಸುಷ್ಮಾ ರಾಜ್ ಈ ನಾಲ್ವರೆ ಆ ತ್ರಿಮೂರ್ತಿಗಳಿಗೆ ಜೋಡಿಗಳು. ಈ ನಾಲ್ವರಲ್ಲಿ, ಮಾನಸಿ ಮತ್ತು ಸನಾತನಿ ಕೆಲವು ಸಿನಿಮಾ ಮತ್ತು ಟಿ.ವಿ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಮದರಂಗಿ ಚಿತ್ರದ ಮೂಲಕ ಸುಷ್ಮಾ ರಾಜ್ ಬಣ್ಣದ ಲೋಕಕ್ಕೆ ಪಾದಾರ್ಪಣೆಯನ್ನು ಮಾಡಿದರೆ, ಪವಿತ್ರ ಗೌಡ ಈ ಚಿತ್ರದಿಂದ ಬಣ್ಣದ ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರದಲ್ಲಿ ಸುಷ್ಮಾ ರಾಜ್ ರಮೇಶ್ ಅರವಿಂದ್ ಜೋಡಿಯಾಗಿ ನಟಿಸುತ್ತಿದ್ದಾರೆ.

ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಲ್ಕು ಹಾಡುಗಳನ್ನು ಈ ಚಿತ್ರಕ್ಕೆ ಸಂಯೋಜಿಸಿದ್ದಾರೆ. ಜಗದೀಶ್ ವಾಲಿ ಚಿತ್ರದ ಛಾಯಾಗ್ರಹಣವನ್ನು ನೋಡಿಕೊಳ್ಳುತ್ತಿದ್ದಾರೆ. ಉಮಾಶ್ರೀ, ಸಾಧು ಕೋಕಿಲ, ಮುಖ್ಯಮಂತ್ರಿ ಚಂದ್ರು ಮತ್ತು ಮುಂತಾದವರು ಈ ತ್ರಿಮೂರ್ತಿಗಳ ಜೊತೆಗೂಡಿ ನಿಮ್ಮನ್ನು ನಗಿಸಲಿದ್ದಾರೆ ಚತ್ರಿಗಳು ಸಾರ್ ಚತ್ರಿಗಳು ಚಿತ್ರದ ಮೂಲಕ.

ಈ ತ್ರಿಮೂರ್ತಿಗಳು ಎಷ್ಟು ಚತ್ರಿಕೆಲಸ ಮಾಡಿ ನಮ್ಮನ್ನು ರಂಜಿಸಲಿದ್ದಾರೆಂದು ಕಾದು ನೋಡಬೇಕಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech