Close X

ಆರ್. ಚಂದ್ರುರ ಚಾರ್ಮಿನಾರ್ ಇದೇ ಜನವರಿ ಕೊನೆಗೆ ಬಿಡುಗಡೆಯಾಗಲಿದೆ

ಚಾರ್‌ಮಿನಾರ್ ಚಿತ್ರದ ಮೂಲಕ ನಿರ್ದೇಶಕನಿಂದ ನಿರ್ಮಾಪಕನಾಗಿರುವ ಆರ್. ಚಂದ್ರು, ತಮ್ಮ ಚಿತ್ರವನ್ನು ಜನವರಿ ತಿಂಗಳ ಕೊನೆಯಲ್ಲಿ ಖಂಡಿತವಾಗಿ ಬಿಡುಗಡೆಗೊಳಿಸುವ ವಿಶ್ವಾಸವನ್ನು ತೋರಿದ್ದಾರೆ.

ಲವ್‌ಲೀ ಸ್ಟಾರ್ ಪ್ರೇಮ ಮತ್ತು ಮೇಘನ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಧ್ವನಿಸುರಳಿಯನ್ನು ಆರ್. ಚಂದ್ರು ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಳಿಸಿದ್ದರು. ಈಗಾಗಲೇ ಚಿತ್ರದ ಆಡಿಯೋ ಮಾರುಕಟ್ಟೆಯಲ್ಲಿ ಹಿಟ್ ಆಗಿದೆ. ರಾಧೆ ರಾಧೆ ಹಾಡಿನ ಸಂಗೀತ ಮತ್ತು ಹಾಡಿನ ಚಿತ್ರೀಕರಣ ಎಲ್ಲರೂ ಇಷ್ಟಪಟ್ಟಿದ್ದಾರೆ.

Charminar Movie release dates

Charminar Movie release dates

ಇಲ್ಲಿಯವರೆಗೆ ಚಿತ್ರದ ಪಬ್ಲಿಸಿಟಿ ಉತ್ತಮವಾಗಿದೆ. ಹಾಗಾಗಿ ಇನ್ನು ಕಾಯುವ ಅವಶ್ಯಕತೆ ಇಲ್ಲ. ನನ್ನ ಚಿತ್ರವೇ ಮಾತಾಡುತ್ತೆ. ಸಂಕ್ರಾಂತಿ ಹಬ್ಬದ ಹೊತ್ತಿಗೆ ಚಿತ್ರದ ಮೊದಲ ಪ್ರತಿ ತಯಾರಾಗುವುದು. ತದನಂತರ, ಚಿತ್ರವನ್ನು ಸೆನ್ಸಾರ್ ಪರೀಕ್ಷೆಗೆ ಒಳಪಡಿಸಲಾಗುವುದು. ಎಂದರು ಚಂದ್ರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech