Close X

ಬುಲ್ ಬುಲ್ ಚಿತ್ರದ ಹಾಡಿನ ಶೂಟಿಂಗ್‌ನಲ್ಲಿ ಹೆಜ್ಜೆ ಹಾಕಿದ ಜೂನಿಯರ್ ಮತ್ತು ಸೀನಿಯರ್

ತೂಗುದೀಪ್ ಪ್ರೊಡಕ್ಷನ್‌ನ “ಬುಲ್ ಬುಲ್” ಚಿತ್ರದ ಅದ್ದೂರಿ ಹಾಡಿನ ಚಿತ್ರೀಕರಣ ಇತ್ತೀಚೆಗಷ್ಟೆ ನಗರದ ಪ್ಯಾಲೇಸ್, ಅಭಿಮಾನ್ ಸ್ಟೂಡಿಯೋ, ಮೀನಾಕ್ಷಿ ಮಾಲ್ ಮತ್ತು ಇತರ ಪ್ರದೇಶಗಳಲ್ಲಿ ನಡೆಸಲಾಯಿತು.

“ಜೂನಿಯರ್ ಸೀನಿಯರ್ ಅರರೇ….. ಜೂನಿಯರ್ ಹೇಳಪ್ಪ ಸೀನಿಯರ್” ಹಾಡಿಗೆ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಛಾಲೇಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದರು. ಇವರೊಂದಿಗೆ ನೂರಾರು ಡ್ಯಾನ್ಸರ್ಸ್ ಕೂಡ ವಿವಿಧ ವೇಷ ಭೂಷಣಗಳಲ್ಲಿ ಹೆಜ್ಜೆ ಹಾಕಿದರು. ಈ ಹಾಡನ್ನು ಅದ್ದೂರಿಯಾಗಿ ನೃತ್ಯ ಸಂಯೋಜಕ ಹರ್ಷರ ನೇತೃತ್ವದಲ್ಲಿ ಚಿತ್ರೀಕರಿಸಲಾಯಿತು. ಆರು ದಿನಗಳ ಈ ಹಾಡಿನ ಚಿತ್ರೀಕರಣಕ್ಕೆ ಖರ್ಚಾಗಿದ್ದು ಬರೊಬ್ಬರಿ 80 ಲಕ್ಷ ರೂಪಾಯಿ. ಚಿತ್ರಕ್ಕೆ ಜಂಟಿಯಾಗಿ ನಿರ್ಮಾಪಕರೊಲ್ಲೊಬ್ಬರಾದ ಕವಿರಾಜ್ ಈ ಹಾಡನ್ನು ಬರೆದಿದ್ದಾರೆ.

Bul Bul movie song shoot

Bul Bul movie song shoot

ತೂಗುದೀಪ್ ಶ್ರೀನಿವಾಸ್ ಹೇಳುವಂತೆ, ಈ ಚಿತ್ರವು ತಂತ್ರಜ್ಞರ ಚಿತ್ರವಾಗಿದೆ. ಕವಿರಾಜ್ ಮೊಟ್ಟಮೊದಲ ಬಾರಿಗೆ ಈ ಚಿತ್ರದೊಂದಿದೆ ಸಂಭಾಷಣಾಕಾರರಾಗಿದ್ದಾರೆ. ಕೃಷ್ಣ ಕುಮಾರ್ ಛಾಯಾಗ್ರಹಾಕರಾಗಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದರೆ, ಎಂ. ಡಿ. ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಐವರು ಈ ಚಿತ್ರಕ್ಕೆ ಜಂಟಿ ನಿರ್ಮಾಪಕರುಗಳು.

ಉಳಿದ ತಂತ್ರಜ್ಞರುಗಳೆಂದರೆ ಸೌಂದರ್ ರಾಜ್ ಎಡಿಟಿಂಗ್, ಮಲ್ಲಿಕಾರ್ಜುನ್ ಸಹಾಯಕ ನಿರ್ದೇಶಕ,, ಈಶ್ವರಿ ಕುಮಾರ್ ಕಲಾ ನಿರ್ದೇಶಕ, ರವಿ ವರ್ಮ ಸಾಹಸದ ಸ್ಟಂಟ್ಸ್‌ನ್ನು ಮಾಡಿದ್ದಾರೆ.

ರಚಿತಾ ರಾಮ್ ನಾಯಕಿಯಾದರೆ, ಅಶೋಕ್, ಚಿತ್ರ ಶೆಣೈ, ಶರಣ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ ಮುಂತಾದವರೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದರ್ಶನ್‌ರ ಮತ್ತೊಂದು ಚಿತ್ರ ವಿರಾಟ್‌ನ ಚಿತ್ರೀಕರಣವು ಕೂಡ ಭರದಿಂದ ಸಾಗಿದ್ದು, “ಬುಲ್ ಬುಲ್” ಮೊದಲು ರಿಲೀಸ್ ಕಾಣಲಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech