Close X

ಫೆಬ್ರವರಿ 1ಕ್ಕೆ ಬಂಗಾರಿ ಬಿಡುಗಡೆ

ಲೂಸ್ ಮಾದಾ ಯೋಗಿ ಮತ್ತು ಕನ್ನಡದ ಬಂಗಾರಿ ರಾಗಿಣಿ ದ್ವಿವೇದಿ ನಟಿಸಿರುವ “ಬಂಗಾರಿ” ಚಿತ್ರವು ಫೆಬ್ರವರಿ 1ಕ್ಕೆ ಈ ವರ್ಷದ ದೊಡ್ಡ ರಿಲೀಸ್‌ನ್ನು ಕಾಣುತ್ತಿದೆ. 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಚಿತ್ರವು ಬಿಡುಗಡೆಯಾಗುತ್ತಿರುವುದು ನಟ ಯೋಗೇಶ್‌ಗೆ ಖುಷಿ ತಂದಿದೆ. ಅವರ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರವೇ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು.

bangari movie releaseರಾಗಿಣಿ ಕನ್ನಡದ ಮನಮೋಹಕ ನಟಿ ಚಿತ್ರದ ಬಗ್ಗೆ ಹೀಗೆ ಹೇಳುತ್ತಾರೆ : “ಚಿತ್ರವು ಉತ್ತಮವಾಗಿ ಮೂಡಿಬಂದಿದ್ದು, ಚಿತ್ರದ ಎಲ್ಲಾ ಹಾಡುಗಳು ಚಿತ್ರೀಕರಣ ಕೂಡ ಸೂಪರ್ ಆಗಿದೆ. ಬಂಗಾರಿ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಲಿದೆ” ಎಂದು ವಿಶ್ವಾಸದಿಂದ ಹೇಳಿದರು. ಚಿತ್ರದ ನಿರ್ದೇಶಕ ಮಾ. ಚಂದ್ರು ಮಾತನಾಡುತ್ತಾ, “ಚಿತ್ರದ ಬಗ್ಗೆ ನಾನೇನು ಹೇಳಲ್ಲ. ನನ್ನ ಚಿತ್ರವೇ ಮಾತನಾಡುತ್ತೆ” ಎಂದರು. ತಮಗೆ ಚಿತ್ರೀಕರಣದ ವೇಳೆ ಎಲ್ಲಾ ಪ್ರೋತ್ಸಾಹ ಕೊಟ್ಟ ನಿರ್ಮಾಪಕ ಎಲ್ಲಪ್ಪ ಮತ್ತು ಚಿತ್ರದ ನಾಯಕ ಯೋಗಿಗೆ ಧನ್ಯವಾದಗಳನ್ನು ಅರ್ಪಿಸಿದರು.

ನಟ ಯೋಗೇಶ್ ಮಾತನಾಡಿ – “ಈ ಚಿತ್ರದಲ್ಲಿ ನಾನು ಬಾವನಾತ್ಮಕ ದೃಶ್ಯಗಳಲ್ಲಿ ನಟಿಸಿದ್ದೇನೆ. ನನ್ನ ಪಾತ್ರ ಖುಷಿ ತಂದುಕೊಟ್ಟಿದೆ. ಹೊಸ ನೃತ್ಯ ನಿರ್ದೇಶಕ ರಾಜು ಶ್ರಮವಹಿಸಿ ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ” ಎಂದರು.

ನಿರ್ಮಾಪಕ ಎಲ್ಲಪ್ಪ ಚಿತ್ರದಲ್ಲಿ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುವಂತಹ ಅಂಶಗಳಿವೆ ಎಂದರು. ಎ. ಎಂ. ನೀಲ್ ಚಿತ್ರಕ್ಕೆ ಸಂಗೀತವನ್ನು ಒದಗಿಸಿದ್ದು, ಇದು ಅವರ ಯೋಗೇಶ್‌ನೊಡನೆ ಎರಡನೇ ಚಿತ್ರವಾಗಿದೆ. ಚಿತ್ರದ ಹಾಡುಗಳು ವಿಭಿನ್ನವಾಗಿ ಮೂಡಿಬಂದಿದೆ ಎನ್ನುತ್ತಾರೆ ನೀಲ್.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech