Close X

ಫೆಬ್ರವರಿ 20ರಿಂದ ಶಿವಣ್ಣರ ಬಜರಂಗಿ

ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಹರ್ಷ ಶಿವರಾಜ್‌ಕುಮಾರ್ ಜೊತೆಗೆ “ಬಜರಂಗಿ” ಚಿತ್ರವನ್ನು ಮಾಡಲು ಸನ್ನದ್ಧರಾಗಿದ್ದಾರೆ. “ಬಜರಂಗಿ” ಚಿತ್ರದ ಶೂಟಿಂಗ್ ಇದೇ ಫೆಬ್ರವರಿ 20ರಿಂದ ಶುರುವಾಗಲಿದೆ. ಈ ಚಿತ್ರಕ್ಕೆಂದೇ ಶಿವಣ್ಣ SIX PACK ABSನ್ನು ಹೊಂದಲು ಕಸರತ್ತು ಮಾಡುತ್ತಿದ್ದಾರೆ. ನಿರ್ದೇಶಕ ಹರ್ಷ ವಿಭಿನ್ನ ಮನರಂಜನೆಯ ಸ್ಕ್ರಿಫ್ಟೊಂದನ್ನು ತಯಾರಿಸಿದ್ದು, ಶಿವಣ್ಣರಿಗೆ ಹಿಡಿಸಿದೆ. ಚಿತ್ರದಲ್ಲಿ ಶರ್ಟ್ ತೆಗೆದು ತೊರಿಸುವ ಒಂದು ದೃಶ್ಯವಿರುವುದರಿಂದ, ಅದಕ್ಕೆ ತಕ್ಕಂತೆ SIX PACK ABSನ್ನು ಹೊಂದಲು ಹರ್ಷ ಸೂಚಿಸಿದ್ದರು. ಹಾಗಾಗಿ, ಶಿವಣ್ಣ SIX PACK ABSನ್ನು ಹೊಂದಲು ಬಹಳಷ್ಟು ಕಸರತ್ತು ಮಾಡುತ್ತಿದ್ದಾರೆ.

Shivarajkumar-Director-Harshaಚಿತ್ರದಲ್ಲಿ ಎರಡು ಹೀರೋಯಿನ್‌ಗಳಿದ್ದು, ಭಾವನ ಮತ್ತು ಪ್ರಿಯಾಮಣಿಯವರನ್ನು ಪರಿಗಣಿಸಿದ್ದು, ಅವರ ಆಯ್ಕೆ ಇನ್ನೂ ನಡೆದಿಲ್ಲ. ನಟರಾಜ್ ಗೌಡ ಚಿತ್ರವನ್ನು ನಿರ್ಮಿಸುತ್ತಿದ್ದು, ಶಿವಣ್ಣರಿಗೆ ದಕ್ಷಿಣ ಭಾರತದ ಪ್ರಖ್ಯಾತ ಹೀರೋಯಿನ್‌ನ್ನು ಜೋಡಿಯಾಗಿಸಲು ನಿರ್ಮಾಪಕರು ಸೂಚಿಸಿದ್ದಾರೆ. ಹಾಗಾಗಿಯೇ ಹಿರೋಯಿನ್‌ಗಳ ಆಯ್ಕೆ ಇನ್ನೂ ನಡೆದಿಲ್ಲ.

ಈ ಚಿತ್ರದಲ್ಲಿ ಮತ್ತೊಂದು ವಿಭಿನ್ನತೆಯೆಂದರೆ, ಮೂರು ವಿಭಿನ್ನ ಖಳನಟರನ್ನು ಪರಿಚಯಿಸಲಾಗುವುದು. ಚಿತ್ರದ ಹಾಡುಗಳ ರೆಕಾರ್ಡಿಂಗ್ ಫೆಬ್ರವರಿ 13ರಿಂದ ನಡೆಯಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯರವರು ಸಂಗೀತದ ಹೊಳೆಯನ್ನು ಹರಿಸಲಿದ್ದಾರೆ.

Related Posts Plugin for WordPress, Blogger...
Copyright © 2014 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech