Close X

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಟಿ – ಕಾರ್ತಿಕ

ಸ್ಯಾಂಡಲ್ ವುಡ್‌ಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ನಾಯಕಿ ಕಾರ್ತಿಕಾ ತುಂಬ ಖುಷಿಯಾಗಿದ್ದಾರೆ. ಹಳೆಯ ನಟಿ ರಾಧಾ‌ರ ಹಿರಿಯ ಮಗಳು ಕಾರ್ತಿಕಾ ಈಗಾಗಲೇ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಕಾರ್ತಿಕಾ ಈಗ ದರ್ಶನ್ ಎದುರು ತೆಲುಗಿನ ಬೃಂದಾವನಂ ಚಿತ್ರದ ಕನ್ನಡ ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಕನ್ನಡದಲ್ಲೂ ಬೃಂದಾವನಂ ಎನ್ನುವ ಚಿತ್ರ ಶೀರ್ಷಿಕೆಯನ್ನೇ ಇಡಲಿದ್ದಾರಂತೆ. ಕನ್ನಡ ಅವತರಣಿಕೆಯನ್ನು ಕೆ. ಮಾದೇಶ್ ನಿರ್ದೇಶಿಸುತ್ತಿದ್ದಾರೆ.

Actress karthika enters sandalwoodಕಾರ್ತಿಕಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ನಟಿಸಲು ಅವರ ತಾಯಿ ರಾಧಾರ ಸ್ಫೂರ್ತಿಯಂತೆ. ಈಗಾಗಲೇ ಉಳಿದ ದಕ್ಷಿಣ ಭಾರತದ ಭಾಷೆಗಳ ಚಿತ್ರಗಳಲ್ಲಿ ಒಳ್ಳೆ ಹೆಸರನ್ನು ಮಾಡಿರುವ ಕಾರ್ತಿಕಾ ಕನ್ನಡದಲ್ಲೂ ದೊಡ್ಡ ಹೆಸರನ್ನು ಗಳಿಸುವ ಹಂಬಲದಲ್ಲಿದ್ದಾರೆ. ಹಾಗೇನೇ, ಈಗಲೇ ಬಾಲಿವುಡ್‌ನ ಯಾವುದೇ ಕನಸು ಅವಳಿಗಿಲ್ಲವಂತೆ. ದಕ್ಷಿಣ ಭಾರತದ ಭಾಷೆಗಳಲ್ಲಿ ನಟಿಸುತ್ತಿರುವುದು ಅವಳಿಗೆ ಖುಷಿ ತಂದಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech