Close X

ಕೆಲವು ಬದಲಾವಣೆಗಳೊಂದಿದೆ ಎರಡನೇ ವಾರದಲ್ಲೂ ಭರ್ಜರಿ ಯಶಸ್ಸು ಕಾಣುತ್ತಿರುವ “ಲಕ್ಷ್ಮೀ”

ಭರಣಿ ಮಿನೆರೆಲ್ಸ್‌ನ ಎರಡನೇ ಚಿತ್ರ “ಲಕ್ಷ್ಮೀ” ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಂಡಿದೆ. ಶಿವರಾಜ್ ಕುಮಾರ್ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಲಕ್ಷ್ಮೀ” ಚಿತ್ರವು ಕಳೆದ ಜನವರಿ 18ರಂದು ರಾಜ್ಯಾದ್ಯಂತ ತೆರೆಕಂಡಿತ್ತು. ಈ 12 ದಿನಗಳಲ್ಲಿ 7.5 ಕೋಟಿಯನ್ನು ತನ್ನ ತೆಕ್ಕೆಗೆ ಬಾಚಿಕೊಂಡಿದೆಯಂತೆ. ಮೊದಲ ವಾರದಲ್ಲಿ 169 ಥಿಯೇಟರುಗಳಲ್ಲಿ ತೆರೆಕಂಡರೆ, ಎರಡನೇ ವಾರದಲ್ಲಿ 120 ಥಿಯೇಟರುಗಳಲ್ಲಿ ತೆರೆಕಾಣುತ್ತಿದೆ.

ರಾಘವ ಲೋಕಿ ನಿರ್ದೇಶನದ “ಲಕ್ಷ್ಮೀ” ಚಿತ್ರವು ಎರಡನೇ ವಾರದಲ್ಲಿ ಕೆಲವು ಕತ್ತರಿಕೆಲಸಗಳನ್ನು ಕಂಡಿದೆ. ಅವುಗಳಲ್ಲಿ 20 ನಿಮಿಷದ ದೃಶ್ಯವನ್ನ ತೆಗೆದು ಹಾಕಲಾಗಿದ್ದು, ಪುಸ್ಸಿ ಕ್ಯಾಟ್ ಹಾಡೊಂದನ್ನು ಕೂಡ ತೆಗೆಯಲಾಗಿದೆ. ಮತ್ತೊಂದು ಬದಲಾವಣೆಯೆಂದರೆ ಕಮ್ಮು ಕಮ್ಮು ಕಾಮಣ್ಣ ಹಾಡನ್ನು ದ್ವಿತೀಯಾರ್ಧಕ್ಕೆ ನೂಕಲಾಗಿದೆ.

Lakshmi movie box office collection

Lakshmi movie box office collection

ಲಕ್ಷ್ಮೀ ಚಿತ್ರದ ಸಕ್ಸಸ್ ಹಂಚಿಕೊಳ್ಳಲು ಭರಣಿ ಮಿನೆರಲ್ಸ್‌ನ ಭಾಸ್ಕರ್ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಶಿವಣ್ಣರ ಅಭಿಮಾನಿಗಳಿಗೆ, ರಾಜ್ಯದ ಜನತೆಗೆ ಮತ್ತು ಎಲ್ಲ ಸಹಕಾರ ಕೊಟ್ಟ ಸಿನಿಮಾ ತಂಡಕ್ಕೆ ಧನ್ಯವಾದಗಳನ್ನು ಸೂಚಿಸಿದರು. ಮೇಲೆ ಸೂಚಿಸಿದ ಬದಲಾವಣೆಗಳನ್ನು ಮಾದ್ಯಮದವರೆ ಸೂಚಿಸಿದ್ದು, ವೀಕ್ಷಕರ ಅಭಿಪ್ರಾಯವು ಅದೇ ಆಗಿದ್ದರಿಂದ ಈ ಬದಲಾವಣೆಗಳನ್ನು ಲಕ್ಷ್ಮೀ ಚಿತ್ರ ಕಂಡಿದೆ ಎಂದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech