Close X

ವರ್ಷದ ಮೊದಲ ಚಿತ್ರ – ಗಲಾಟೆ

ಈ ವರ್ಷ 2013ರ ಮೊದಲ ಚಿತ್ರವಾಗಿ “ಗಲಾಟೆ” ಬಿಡುಗಡೆ ಗೊಳ್ಳುತ್ತಿದೆ. ಪ್ರಜ್ವಲ್ ದೇವರಾಜ್, ಕ್ರಿತಿ ಖರಬಾಂಡಾ, ಹಾರ್ದಿಕ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಎಂ. ಡಿ. ಶ್ರೀಧರ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯವನ್ನು ತಿಳಿಸಲಾಯಿತು. ಪ್ರತಿಕಾ ಗೋಷ್ಟಿಯಲ್ಲಿ, ನಿರ್ಮಾಪಕ ರಾಜೇಂದ್ರ ಕುಮಾರ್, ನಿರ್ದೇಶಕ ಎಂ. ಡಿ. ಶ್ರೀಧರ್, ಛಾಯಾಗ್ರಾಹಕ ಕೃಷ್ಣಕುಮಾರ್, ಎಡಿಟರ್ ಸೌಂದರ್‌ ರಾಜ್, ಚಿತ್ರದ ಇಬ್ಬರು ನಾಯಕಿಯರು – ಕ್ರಿತಿ ಖರಬಾಂಡಾ ಮತ್ತು ಹಾರ್ದಿಕ್ ಶೆಟ್ಟಿ ಪಾಲ್ಗೊಂಡಿದ್ದರು. ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಎಲ್ಲಾ ಮುಗಿದ ಮೇಲೂ ಒಂದು ಭೇಟಿಕೊಟ್ಟ ತಾವು ಈ ಚಿತ್ರದ ನಾಯಕ ಎಂದು ತಿಳಿಸಿದರು.

Galate movie release - Jan 11th 2013

ನಿರ್ದೇಶಕ ಎಂ. ಡಿ. ಶ್ರೀಧರ್ ಮಾತನಾಡುತ್ತಾ – “ನನ್ನ ಹಿಂದಿನ ಚಿತ್ರಗಳಾದ “ಫ್ರೆಂಡ್ಸ್”, “ಚೆಲ್ಲಾಟ” ಮತ್ತು “ಕೃಷ್ಣ” ಚಿತ್ರಗಳನ್ನು ಮೆಚ್ಚಿದ ಪ್ರೇಕ್ಷಕರು, ಈ ಚಿತ್ರವನ್ನು ಮೆಚ್ಚಲಿದ್ದಾರೆ ಎಂಬ ಭರವಸೆ ನನಗಿದೆ” ಎಂದರು.

ರಾಜೇಂದ್ರ ಕುಮಾರ್ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ – “ಒಂದು ಹಾಸ್ಯ ಚಿತ್ರವನ್ನು ಮಾಡುವ ಆಸೆ ಇತ್ತು. ಜನ ಚಿತ್ರಮಂದಿರಗಳಿಂದ ನಗು ಮುಖದಲ್ಲಿ ಹೊರ ಬರಬೇಕು ಅಂತಹ ಚಿತ್ರವನ್ನು ಮಾಡಲು ಬಯಸಿದ್ದೆ. ಇದೀಗ ಗಾಲಾಟೆ ಚಿತ್ರದ ಮೂಲಕ ಆ ಗುರಿಯನ್ನು ತಲುಪಿದ್ದೇನೆ” ಎಂದರು.

ಚಿತ್ರದ ನಾಯಕಿ ಕ್ರಿತಿ ಖರಬಾಂಡಾ NRI ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಾತನಾಡುತ್ತಾ, ಈ ಚಿತ್ರದ ಕೆಲಸ ಮಾಡಿ ಅದ್ಭುತ ಅನುಭವವನ್ನು ಪಡೆದಿದ್ದೇನೆ ಎಂದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech