Close X

ಪುನೀತ್ ರಾಜ್‌ಕುಮಾರ್‍‌ “ಯಾರೇ ಕೂಗಾಡಲಿ” ಎಂದು ಇಂದಿನಿಂದ ಕೂಗಲಿದ್ದಾರೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರ 2012ನೇ ವರ್ಷದ ಎರಡನೇ ಚಿತ್ರ (ಮೊದಲನೆಯದು ಅಣ್ಣಾಬಾಂಡ್) “ಯಾರೇ ಕೂಗಾಡಲಿ” ಇಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ರಾಜ್‌ ಬ್ಯಾನರ್‌ನ 82ನೇ ಚಿತ್ರವಾಗಿದ್ದು, ತಮಿಳಿನ ಪೋರಾಳಿ ಚಿತ್ರದ ರೀಮೇಕ್ ಆಗಿದೆ. ತಮಿಳಿನಲ್ಲಿ ನಿರ್ದೇಶಿಸಿದ ಸಮುತ್ತಿರಖಣಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ನೊಂದಿಗೆ ಕನ್ನಡದಲ್ಲಿ ಲಕ್ಕಿ ಯಾಗಿ ಪರಿಣಮಿಸಿರುವ ಮಲ್ಲು ಹೀರೋಯಿನ್ ಭಾವನ(ಜಾಕಿ, ವಿಷ್ಣುವರ್ಧನ, ರೋಮಿಯೋ…. ), ಲೂಸ್ ಮಾದಾ ಯೋಗಿ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ ಚಿತ್ರದಲ್ಲಿ ಎರಡು ವಿಭಿನ್ನ ಗೆಟಪ್‌ಗಳಿವೆಯಂತೆ. ಅದನ್ನು ನೀವೇ ಥಿಯೇಟರಿಗೆ ಹೋಗಿ ನೋಡಿದರೆ ಚೆನ್ನ.

Yaare Koogadali movie Release

Yaare Koogadali movie Release

ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಸಿನಿಪೋಲೀಸ್ ಮಲ್ಟಿಪ್ಲೆಕ್ಸ್ ಮುಂಗಡ ಕಾಯ್ದಿರಿಸುವಿಕೆಯನ್ನು ಆರಂಭಿಸಿದೆ. ಚಿತ್ರದ ಮುಂಗಡ ಬುಕಿಂಕ್‌ನ್ನು ಸೋಮವಾರವೇ ತೆರೆಯಲಾಯಿತು. ಉತ್ಸಾಹಭರಿತೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಪುನೀತ್ ರಾಜ್‌ಕುಮಾರ್‍೬ರನ್ನು ಹೊಸದೊಂದು ವಿಭಿನ್ನ ಬಗೆಯ ಚಿತ್ರದಲ್ಲಿ ನೋಡಲು ಟಿಕೇಟುಗಳನ್ನು ಮುಂಗಡ ಕಾಯ್ದಿಸುತ್ತಿದ್ದಾರೆ. 6 ಶೋಗಳನ್ನು ನಡೆಸುತ್ತಿದೆ ಸಿನಿಪೋಲೀಸ್ ಚಿತ್ರಮಂದಿರ. ಮೊದಲ ನಾಲ್ಕು ದಿನಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಗಡ ಬುಕಿಂಗ್ ದಾಖಲೆ ನಿರ್ಮಿಸಲಿದೆ ಎಂದು ವ್ಯಾಪಾರ ವೀಕ್ಷಕರು ತಿಳಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಈಗಾಗಲೇ ಪುನೀತ್ ಕಟ್‌ಔಟ್‌ಗೆ ಹಾಲಿನ ಅಭಿಷೇಕ, ಮೆರವಣಿಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech