Close X

ಯಾರೇ ಕೂಗಾಡಲಿ ಹಾಡುಗಳನ್ನು ಕೇಳಿ ಆನಂದಿಸಿ

ರಾಜ್‌ಕುಮಾರ್ ಫ್ಯಾಮಿಲಿ ಬ್ಯಾನರ್‌ನಡಿಯಲ್ಲಿ ಸಮುತ್ತಿರಖಣಿ ನಿರ್ದೇಶನದಲ್ಲಿ ಪುನೀತ್ ಅಭಿನಯದ ಯಾರೇ ಕೂಗಾಡಲಿ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಲೀ ಮೆರಿಡಿಯನ್ ನಲ್ಲಿ ಸೋಮವಾರ ಜರುಗಿತ್ತು. ರಾಜ್‌ಕುಮಾರ್ ಫ್ಯಾಮಿಲಿ ಬ್ಯಾನರ್‌ನಡಿಯಲಿಲ್ ಇದು 81ನೇ ಚಿತ್ರವಾಗಿದೆ.

Yaare-Koogadali-Audio-Release

ವಿ ಹರಿಕೃಷ್ಣರ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಚಿತ್ರತಂಡದ ಸದಸ್ಯರುಗಳಿಂದ ಬಿಡುಗಡೆ ಗೊಳಿಸಲಾಯಿತು. ಚಿತ್ರದ ನಟ ನಟಿಯರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಲೂಸ್ ಮಾದಾ ಯೋಗೀಶ್, ಸಿಂಧು ಲೋಕನಾಥ್, ನಿವೇದಿತಾ, ಲಕ್ಷ್ಮೀ ಹೆಗ್ಡೆ, ಮಾಳವಿಕಾ ಮುಂತಾದವರೂ ಕಾರ್ಯಕ್ರಮದಲ್ಲಿ ಪ್ರಸ್ತುತರಿದ್ದರು. ಛಾಯಗ್ರಾಹಕ ಸುಕುಮಾರ್, ಸಂಭಾಷಣೆ ಬರಹಗಾರ ಗುರುಪ್ರಸಾರ್ (ಮಠ ನಿರ್ದೇಶಕ), ಸ್ಟಂಟ್ ಮಾಸ್ಟರ್ ರವಿ ವರ್ಮ, ಕಲಾ ನಿರ್ದೇಶಕ ಜ್ಯಾಕ್ಸನ್, ಆನಂದ್ ಆಡಿಯೋದ ಮೋಹನ್, ನೃತ್ಯ ನಿರ್ದೇಶಕ ಕಲೈ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರೆ, ಚಿತ್ರದ ನಾಯಕಿ ಭಾವನಾ ಮತ್ತೊಂದು ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ಕಾರಣ ಈ ಕಾರ್ಯಕ್ರಮದಲ್ಲಿ ಕಾಣಿಸಲಿಲ್ಲ.

ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಯೋಗೇಶ್, ಮಾಳವಿಕಾ ಮುಂತಾದವರಿಂದ ಪ್ರಶಂಸೆಯ ಸುರಿಮಳೆಯನ್ನೇ ಪಡೆದರು ನಿರ್ದೇಶಕ ಸಮುತ್ತಿರಖಣಿ.

ಪುನೀತ್ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, ನಿರ್ದೇಶಕ ಸಮುತ್ತಿರಖಣಿಯಿಂದ ಸಾಕಷ್ಟು ಕಲಿತ್ತಿದ್ದೇನೆ ಎಂದರು. ಪ್ರೇಕ್ಷಕರಿಗೆ ORIGINAL CDಗಳನ್ನೇ ಕೊಂಡು ಹಾಡನ್ನು ಕೇಳಲು ಆಗ್ರಹಿಸಿದರು ಮತ್ತು ಥಿಯೇಟರುಗಳಿಗೆ ಬಂದು ಚಿತ್ರವನ್ನು ನೋಡಲು ವಿನಂತಿಸಿದರು.

ರಾಜ್‌ಕುಮಾರ್ ಫ್ಯಾಮಿಲಿ ಬ್ಯಾನರಿನ ಯಾರೇ ಕೂಗಾಡಲಿ ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ಬರೆದಿದ್ದು, ಇದು ರಾಜ್‌ಕುಮಾರ್ ಫ್ಯಾಮಿಲಿ ಬ್ಯಾನರಿಗೆ ಕೆಲಸ ಮಾಡಿದ ಎರಡನೇ ಚಿತ್ರ. ಈ ಚಿತ್ರವು ಖಂಡಿತವಾಗಿ ಶತದಿನೋತ್ನವ ಆಚರಿಸುತ್ತದೆ ಎಂದರು ಗುರುಪ್ರಸಾದ್.

ಚಿತ್ರದ ಹಾಡುಗಳನ್ನು ಈ ಕೆಳಗೆ ಕೇಳಿ ಆನಂದಿಸಿ….

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech