Close X

ಡಿ. 3ಕ್ಕೆ ಯಾರೇ ಕೂಗಾಡಲಿ ಧ್ವನಿಸುರಳಿ ಅದ್ದೂರಿ ಸಮಾರಂಭ

ಪುನೀತ್ ಅಭಿನಯದ “ಯಾರೇ ಕೂಗಾಡಲಿ” ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವನ್ನು ಡಿ. 3ಕ್ಕೆ ಅಂದರೆ, ಇಂದಿಗೆ ಮುಂದೂಡಲಾಗಿತ್ತು. ಈ ಮೊದಲು ಚಿತ್ರದ ಧ್ವನಿಸುರಳಿಯನ್ನು ನವೆಂಬರ್. 30ಕ್ಕೆ ಬಿಡುಗಡೆಗೊಳಿಸಿ, ಮಾರುಕಟ್ಟೆಯಲ್ಲಿ ಡಿ. 1ರಿಂದ ಲಭ್ಯವಾಗುವ ಹಾಗೇ ತಯಾರಿ ಮಾಡಲಾಗಿತ್ತು. ಆದರೆ, ಅಜಮೀರ್‌ನ ದರ್ಗಾದ ಸಂತರಿಂದ ಆರ್ಶೀವಾದ ಪಡೆಯಲು ಹೋಗಿರುವ ಕಾರಣ ಆನಂದ್ ಆಡಿಯೋ ಡಿ. 1 ರಂದೇ ಹಾಡುಗಳನ್ನು ಮಾರುಕಟ್ಟೆಯಲ್ಲಿ ರಿಲೀಸ್ ಮಾಡಲಾಗಿದ್ದು, ಅಧಿಕೃತ ಬಿಡುಗಡೆಯನ್ನು ಡಿ. 3ರಂದು ಅದ್ದೂರಿ ಸಮಾರಂಭದೊಂದಿಗೆ ರಿಲೀಸ್ ಮಾಡಲಾಗುವುದು.

Yaare-Koogadali-Audio-Releaseಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಚಿತ್ರವನ್ನು ತಯಾರಿಸುತ್ತಿದ್ದು, ಸಮುತ್ತಿರಖಣಿ ನಿರ್ದೇಶಿಸಿದ್ದಾರೆ. ಈಗಾಗಲೇ ಯೋಗರಾಜ್ ಭಟ್ ಬರೆದಿರುವ “123 ಮೈಕ್ ಟೆಸ್ಟಿಂಗ್” ಹಾಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಹಲ್ಲೋ 123 ಮೈಕು ಟೆಸ್ಟಿಂಗ್ ಹಾಡಿನ ಒಂದು ಜಲಕ್ ಇಲ್ಲಿದೆ ಕೇಳಿ ಆನಂದಿಸಿ :

ಯಾರೇ ಕೂಗಾಡಲಿ ಚಿತ್ರದ ಕೆಲವು ಹಳೇ ನ್ಯೂಸ್‌ಗಳು :

1. ನವೆಂಬರ್ 30ರಂದು ಎಲ್ಲೆಡೆ “ಯಾರೇ ಕೂಗಾಡಲಿ”ಯ ಗುನುಗು

2. “ಯಾರೇ ಕೂಗಾಡಲಿ” ಡಿಸೆಂಬರ್‌ನಲ್ಲಿ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech