Close X

ತ್ರಿಷಾ ಈಗ “RUM” ಮೂಲಕ ರಂಭೆಯಾಗಿ ಕನ್ನಡದಲ್ಲಿ

ತೆಲುಗು ಮತ್ತು ತಮಿಳಿನಲ್ಲಿ ಈಗಾಗಲೇ ಸೂಪರ್ ಸ್ಟಾರ್ ಎನಿಸಿಕೊಂಡಿರುವ ತ್ರಿಷಾ ಕ್ರಿಷ್ಣನ್ ಕನ್ನಡದಲ್ಲಿ ತಮ್ಮ ಸತ್ವಪರೀಕ್ಷೆಯನ್ನು ಎದುರಿಸಲಿದ್ದಾರೆ. ಎಂ. ಎಸ್. ರಾಜು ನಿರ್ಮಾಣದ ಮತ್ತು ನಿರ್ದೇಶನದ ಚಿತ್ರಕ್ಕೆ “RUM” ಎಂದು ಹೆಸರಿಡಲಾಗಿದೆ. “RUM” ಎಂದರೆ ರಂಭೆ, ಊರ್ವಶಿ ಮತ್ತು ಮೇನೆಕೆ.

Trisha is set to enter kannada film industry

Trisha is set to enter kannada film industry

2013ರ ಮೊದಲಲ್ಲಿ “RUM” ಚಿತ್ರದ ಮೂಹೂರ್ತಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಇದೊಂದು ತ್ರಿಭಾಷಾ ಚಿತ್ರವಾಗಿದ್ದು, ತೆಲುಗು, ತಮಿಳಿನಲ್ಲದೆ ಕನ್ನಡದಲ್ಲೂ ಚಿತ್ರವನ್ನು ತಯಾರಿಸಲಾಗುವುದು. ಇದರಿಂದ ಬಹಳ ಕಾಲದ ಕನ್ನಡಕ್ಕೆ ಬರುವ ಅಜ್ಞಾತವಾಸದಿಂದ ತ್ರಿಷಾ ಮುಕ್ತಿಹೊಂದಲಿದ್ದಾರೆ. “ಈ ಮೊದಲು ಸಾಕಷ್ಟು ಜನ ಕನ್ನಡದಲ್ಲಿ ನಟಿಸಲು ಪ್ರಸ್ಥಾವನೆಯನ್ನು ತಂದಿದ್ದರು. ಆದರೆ, ಯಾವುದೂ ಕೈಗೂಡಿರಲಿಲ್ಲ. ಈಗ “RUM” ಚಿತ್ರದಿಂದ ಅದು ನೆರವೇರಲಿದೆ” ಎನ್ನುತ್ತಾರೆ ತ್ರಿಷಾ.

“RUM” ಚಿತ್ರವು ಸ್ತ್ರೀಪ್ರಧಾನ ಚಿತ್ರವಾಗಿದ್ದು, ತ್ರಿಷಾ, ಪೂರ್ಣ ಮತ್ತು ಅರ್ಚನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಎಂ. ಎಸ್. ರಾಜು ನಿರ್ಮಾಣದ ವರ್ಷಂ, ನೀ ವಸ್ತಾವಂಟೆ ನೇನು ಒದ್ದಂಟಾನಾ, ಮತ್ತು ಪೌರ್ಣಮಿ ಚಿತ್ರಗಳಲ್ಲಿ ತ್ರಿಷಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech