Close X

ಕೆ. ಮಂಜುರ ಅದ್ದೂರಿ ಕಾರ್ಯಕ್ರಮದಲ್ಲಿ “ರಜನಿಕಾಂತಾ” ಆಡಿಯೋ ಬಿಡುಗಡೆ

ತುರುವೇಕೆರೆಯ ಗುರುಭವನ ಮೈದಾನದಲ್ಲಿ ದೊಡ್ಡ ಜನಸ್ತೋಮದ ನಡುವೆ ದುನಿಯಾ ವಿಜಯ್ ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ “ರಜನಿಕಾಂತಾ” ಚಿತ್ರದ ಧ್ವನಿಸುರಳಿಯನ್ನು ಭಾನುವಾರದ ಸಂಜೆಯಲ್ಲಿ ಬಿಡುಗಡೆಗೊಳಿಸಲಾಯಿತು. ಕನ್ನಡದ ಸೂಪರ್ ಸ್ಟಾರ್‌ಗಳಾದ ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್‌ರಂತಹ ದೊಡ್ಡ ಸ್ಟಾರ್‌ಗಳ ಹಿಂಡನ್ನೇ ಕೆ. ಮಂಜು ಈ ಕಾರ್ಯಕ್ರಮಕ್ಕೆ ಸೇರಿಸಿದ್ದಾರೆ.

ದುನಿಯಾ ವಿಜಯ್ ಮತ್ತು ಐಂದ್ರಿತಾ ರೈ ನಟಿಸರುವ ರಜನಿಕಾಂತಾ ಚಿತ್ರದ ಧ್ವನಿಸುರಳಿ ಬಿಡುಗಡೆಗೂ ಮುನ್ನ ಮೂರುಗಂಟೆಗಳ ಮನರಂಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜ್ಯೋತಿ ಬೆಳಗುವುದರಿಂದ ನಟರಾದ ರಮೇಶ್ ಅರವಿಂದ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾರ್ಯಕ್ರಮವನ್ನು ಆರಂಭಿಸಿ ನಿರ್ಮಾಪಕ ಕೆ. ಮಂಜುರಿಗೆ ಹಾರೈಸಿದರು.

Rajani-Kantha-Audio-Release

ಉಪೇಂದ್ರ ಮಾತನಾಡುತ್ತ, ಕೆ. ಮಂಜು ಹಲಸಿನಕಾಯಿಯಂತೆ, ಮೇಲೆ ಮುಳ್ಳಿನಂತೆ ಒರಟಾಗಿದ್ದರು, ಒಳಗಡೆ ಸಿಹಿ ಎಂದು ಬಣ್ಣಿಸಿದರು. ರಮೇಶ್ ಅರವಿಂದ್ ಮಾತನಾಡುತ್ತಾ ಮಮ್ಮೂಟಿ, ಡಾ. ಕಮಲ್ ಹಾಸನ್ ಮುಂತಾದವರನ್ನೂ ಕನ್ನಡ ಸಿನಿಮಾಗಳಲ್ಲಿ ನಟಿಸುವಂತೆ ಮಾಡಿದ್ದಾರೆ ಮಂಜು ಎಂದರು. ಚಿತ್ರದ ಹೆಸರಿನಲ್ಲೇ ಏನೋ ಒಂದು ಪಂಚ್ ಇದೇ ಎಂದರು ರಮೇಶ್.

ದುನಿಯಾ ವಿಜಯ್‌ರ ಕಟುಮಸ್ತಾದ ದೇಹವನ್ನು ನೋಡಿ ದಂಗಾಗಿ, ನಮ್ಮ ತಾಯಾಣೇ ನನಗೆ ಹಾಗೆ ಕಸರತ್ತು ಮಾಡಲು ಸಾಧ್ಯವಿಲ್ಲ ಎಂದರು. ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡುತ್ತಾ, ಕೋತಿಯಂತೆ ಪಲ್ಟಿ ಹೊಡೆಯಿತ್ತಿದ್ದ ದುನಿಯಾ ವಿಜಯ್ ಎಂದು ತಮ್ಮ ಹಳೆಯ ನೆನಪನ್ನು ಮೆಲಕು ಹಾಕಿದರು. ವಿಜಯ್ ಮತ್ತು ಗಣೇಶ್ ಏಕಕಾಲಕ್ಕೆ (ದುನಿಯಾ ಮತ್ತು ಮುಂಗಾರು ಮಳೆ ಅನುಕ್ರಮವಾಗಿ) ಸಿನಿಮಾ ಪ್ರಪಂಚದಲ್ಲಿ ದೊಡ್ಡ ಸ್ಟಾರ್ ಗಿರಿಯನ್ನು ಪಡೆದವರು ಎನ್ನುವದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತೆ.

ದುನಿಯಾ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಪ್ರದೀಪ್ ರಾಜ್‌ರ ನಿರ್ದೇಶನವಿದ್ದು, ಅರ್ಜುನ್ ಜನ್ಯರ ಸಂಗೀತವಿದೆ. ನರಸಿಂಹ ಎಂಟರ್‌ಪ್ರೈಸಸ್‌ನ ಪ್ರಸಾದ್ ಈ ಚಿತ್ರಕ್ಕೆ ವಿತರಕರಾಗಿದ್ದು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕದ ಮಂತ್ರಿಗಳಾದ ರಾಜು ಗೌಡ, ಅಶ್ವಿನಿ ಮೀಡಿಯಾ ನೆಟ್‌ವರ್ಕ್‌ನ ನಾಗಪ್ರಸಾದ್, ನಿರ್ಮಾಪಕ ಶಂಕರೇ ಗೌಡ, ನಿರ್ದೇಶಕ ಪ್ರದೀಪ್ ರಾಜ್, ಕೆ. ಮಂಜು ಮತ್ತು ಶ್ರೀಮತಿ ಮಂಜು ಲಕ್ಷ್ಮೀ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅನಾರೋಗ್ಯದ ಕಾರಣ ಚಿತ್ರದ ನಟಿ ಐಂದ್ರಿತಾ ರೈ ಕಾರ್ಯಕ್ರಮದಲ್ಲಿ ಪಾಲ್ಗೊಳಲಿಲ್ಲ, ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಅನುಪಸ್ಥಿತರಿದ್ದರು.

ಚಿತ್ರದ ನಿರ್ಮಾಪಕ ಕೆ. ಮಂಜು ಎರಡು ಹಾಡುಗಳನ್ನು ದೊಡ್ಡ ಪರದೆಯ ಮೇಲೆ ಬಿಡುಗಡೆ ಮಾಡಿದರು. ಒಂದು ಹಾಡಿಗೆ ದುನಿಯಾ ವಿಜಯ್‍೬ರ ನರ್ತನೆ ಕೂಡ ಜನರಿಗೆ ಮನರಂಜನೆ ಕೊಟ್ಟಿತು.

ರಜನಿಕಾಂತಾ ಚಿತ್ರದ ಒಲವಿನ ಕಿರಣಕ್ಕೆ ಹಾಡಿನ ಒಂದು ಜಲಕ್ ಕೇಳಿ ಈ  ಮಧುರವಾದ ಹಾಡನ್ನು :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech