Close X

ದಂಡುಪಾಳ್ಯದ ಪೂಜಾ ಗಾಂಧಿ ಮತ್ತೊಮ್ಮೆ ಹಂತಕಿಯಾಗಿ !

ದಂಡುಪಾಳ್ಯದ ಹಂತಕಿಯಾಗಿ ಮತ್ತೊಮ್ಮೆ ಪೂಜಾ ಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ. ದಂಡುಪಾಳ್ಯದ ಲಕ್ಷ್ಮಿ ಪಾತ್ರದಲ್ಲಿ ಎಲ್ಲರ ಪ್ರಶಂಸೆ ಪಡೆದ ಪೂಜಾಗಾಂಧಿ ಇದೀಗ “ಹಂತಕಿ (ಕ)” ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಠೀರವ ಸ್ಟೂಡಿಯೋನಲ್ಲಿ ಶನಿವಾರ ನಡೆದ ಹಂತಕಿ(ಕ) ಚಿತ್ರದ ಪತ್ರಕರ್ತರ ಭೇಟಿಯಲ್ಲಿ ಪಾಲ್ಗೊಂಡಿದ್ದರು.

ಹಂತಕಿ ಚಿತ್ರದ ಬಗ್ಗೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ. ಚಿತ್ರದ ಸಣ್ಣ ಕಥೆಯನ್ನು ಹೇಳಿದರು, ಚಿತ್ರದಲ್ಲಿ ಸಸ್ಪೆನ್ಸ್ ಇರುವುದಿಲ್ಲ ಎಂದರು.

Hanthaki Movie Launch

Hanthaki Movie Launch

ಆದರೆ, ಪತ್ರಕರ್ತರಿಗೆ ಈ ಉತ್ತರ ಹಿಡಿಸಲಿಲ್ಲ. ಚಿತ್ರದ ಯಾವುದೇ ಮಾಹಿತಿ ಕೊಡದಿದ್ದಲ್ಲಿ, ಪತ್ರಕರ್ತರನ್ನೇಕೆ ಕರೆಸಿದ್ದೀರಿ ಎಂದು ಕೇಳಿದರು.

ರಾಜಕೀಯದ ಬಗ್ಗೆ ಪತ್ರಕರ್ತರು ಪೂಜಾಗಾಂಧಿಯನ್ನು ಕೇಳಿದಾಗ : “ಮಾಜಿ ಮುಖ್ಯಮಂತ್ರಿ ಬಿ. ಎಸ್. ಎಡಿಯೂರಪ್ಪನವರ ಉತ್ತಮ ಕೆಲಸ ಮತ್ತು ಆದರ್ಶಗಳು ನಾನು ಕೆ.ಜೆ.ಪಿ ಪಕ್ಷವನ್ನು ಸೇರಲು ಸ್ಪೂತಿ. ಅವರ ಎಲ್ಲ ಕೆಲಸಗಳಿಗೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ” ಎಂದರು.

ಚಿತ್ರದ ನಾಯಕ ಸಾಯಿಕುಮಾರ್‌ರ ಕಾರ್ಯಕ್ರಮದಲ್ಲಿ ಪ್ರಸ್ತುತರಿರಲಿಲ್ಲ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech