Close X

12-12-12ರ ವಿಶೇಷದಿನದಂದು ನಂದೀಶನ ಆಡಿಯೋ ಬಿಡುಗಡೆ

ಕನ್ನಡದ ಕಾಮಿಡಿ ನಟ ಕೋಮಲ್ ಕುಮಾರ್  ಅಭಿನಯದ ನಂದೀಶ ಚಿತ್ರದ ಧ್ವನಿಸುರಳಿಯನ್ನು ವಿಶೇಷ ದಿನವಾದ 12-12-12 ರಂದು ಬಿಡುಗಡೆ ಗೊಳಿಸಲಾಯಿತು. ಮತ್ತೊಂದು ವಿಶೇಷವೆಂದರೆ, ಇದೇ ದಿನ ರಜನಿಕಾಂತ್‌ರ ಹುಟ್ಟಿದ ದಿನ ಮತ್ತು ಕೋಮಲ್ ಕುಮಾರ್ ಅವರ ದೊಡ್ಡ ಅಭಿಮಾನಿ. ಹಾಗಾಗಿಯೇ, ಇದೇ ದಿನದಂದು, ತಮ್ಮ ಹೊಸ ಆಡಿಯೋ ಹೌಸ್ “ಗೋವಿಂದಾಯನಮಃ” ವನ್ನು ಉದ್ಘಾಟಿಸಲಾಯಿತು.

Nandees-Audio-Release

Nandeesha-Audio-Release

ಅಣ್ಣ ಜಗ್ಗೇಶ್ ಜೊತೆ ಕೋಮಲ್ ಕುಮಾರ್ ಹೇಳಿದ್ದು ಹೀಗೆ – “ನಾನು ಅಜನಿಕಾಂತ್‍ರ ದೊಡ್ಡ ಅಅಭಿಮಾನಿಯಾಗಿದ್ದು, ಇಂದೇ ನನ್ನ ಹೊಸ ಆಡಿಯೋ ಹೌಸ್ ಗೂಂವಿಂದಾಯನಮಃ ನ ಉದ್ಘಾಟನೆ ಮತ್ತು ನಂದೀಶ ಚಿತ್ರದ ಹಾಡುಗಳ ಬಿಡುಗಡೆ”ಯಿಂದ ಈ ದಿನ ಸುದಿನವಾಗಿ ನನ್ನ ಜೀವನದಲ್ಲಿ ಮೈಲಿಗಲಾಗಿದೆ” ಎಂದರು.

ತಮ್ಮ ಕೋಮಲ್ ಕುಮಾರ್‌ನ ನಂದೀಶ್ ಚಿತ್ರದ ಆಡಿಯೋವನ್ನು ಅಣ್ಣ ಜಗ್ಗೇಶ್  ಬಿಡುಗಡೆಗೊಳಿಸಿ ತಮ್ಮನ ಬಗ್ಗೆ ಹೊಗಳಿಕೆಯ ಮಾತನ್ನಾಡಿದರು. ಜಗ್ಗೇಶ್ ಮಾತನಾಡುತ್ತಾ – “ನನ್ನ ತಮ್ಮ ಅಂತ ಏನು ಹೊಗಳುತ್ತಿಲ್ಲ. ವರ್ಷಾನುಗಟ್ಟಲೆ, ತನ್ನ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಹೋರಾಡಿ ಮೇಲೆ ಬಂದವನು. ಯಾರಾದರೂ ತಮ್ಮ ಜೀವನದಲ್ಲಿ ಮೇಲೆ ಬರಬೇಕೆಂದರೆ, ನಾನು ನನ್ನ ತಮ್ಮ ಉದಾಹರಣೆಯನ್ನು ಕೊಡುತ್ತೇನೆ” ಎಂದರು.

ರೇಣುಕಾಂಭ ಡಿಜಿಟಲ್ ಥಿಯೇಟರಿನಲ್ಲಿ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವು ಸರಳವಾಗಿ ನಡೆಯಿತು. ಚಿತ್ರ ಐದು ಹಾಡುಗಳನ್ನು ಒಳಗೊಂಡಿದ್ದು ಮತ್ತು ಅಧಿಕೃತ ಟ್ರೈಲರ್‌ನ್ನು ಧ್ವನಿಸುರಳಿ ಬಿಡುಗಡೆಯ ನಂತರ ಪತ್ರಕರ್ತರಿಗೆ ಮತ್ತು ನೆರೆದಿದ್ದ ವೀಕ್ಷಕರುಗಳಿಗೆ ತೋರಿಸಲಾಯಿತು.  ಚಿತ್ರದ ಮೊದಲ ಪ್ರತಿ ತಯಾರಾಗಿದ್ದು, ಈ ವರ್ಷವೇ ಬಿಡುಗಡೆಗೊಳಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿರುವುದಾಗಿ ತಿಳಿಸಿದರು ಕೋಮಲ್. ಹಂಸಲೇಖರ ಸಂಗೀತವಿರುವ ನಂದೀಶ ಚಿತ್ರದ ಧ್ವನಿಸುರಳಿಯ 1000 ಸಿಡಿ ಪ್ರತಿಗಳನ್ನು ಸೌಂದರ್ಯ ಲಹರಿ ಕಂಬೈನ್ಸ್ ತಯಾರಿಸಿದ್ದಾರೆ ಎಂದರು
ಓಂ ಸಾಯಿಪ್ರಕಾಶ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಗೋವಿಂದಾಯನಮಃ ಚಿತ್ರದ ಪ್ಯಾರ್ಗೆ ಆಗ್ಬಿಟೈತೆ ಖ್ಯಾತಿಯ ಪರುಲ್ ಯಾದವ್ ಮತ್ತು ಮಾಳವಿಕ ಕೋಮಲ್ ನೊಂದಿಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech