Close X

ವರ್ಣರಂಜಿತ ಸಮಾರಂಭದಲ್ಲಿ ಮೈನಾ ಚಿತ್ರದ ಆಡಿಯೋ ಬಿಡುಗಡೆ

ನಾಗಶೇಖರ್ ನಿರ್ದೇಶನದ ಬಹುನಿರೀಕ್ಷಿತ ಭರವಸೆಯನ್ನು ಮೂಡಿಸಿರುವ ಚಿತ್ರ “ಮೈನಾ“ದ ಧ್ವನಿಸುರಳಿಯು ಭಾನುವಾರ ಸಂಜೆಯ ವರ್ಣರಂಜಿತ ಸಮಾರಂಭದೊಂದಿಗೆ ಬಿಡುಗಡೆಗೊಳಿಸಲಾಯಿತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಧ್ವಸಿಸುರಳಿ ಬಿಡುಗಡೆಗೊಳಿಸಿದರೆ, ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಚಿತ್ರಕ್ಕೆ ಯಶಸ್ಸನ್ನು ಕೋರಿದರು. ಎನ್. ಎಸ್. ರಾಜ್ ಕುಮಾರ್ ನಿರ್ಮಾಣದ, ಚೇತನ್ ಮತ್ತು ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮೈನಾ ಚಿತ್ರದ 3 ಹಾಡುಗಳು ಮತ್ತು ಚಿತ್ರದ ನೂತನ ಅಧಿಕೃ ಟ್ರೈಲರ್‌ನ್ನು ನೆರೆದಿದ್ದ ವೀಕ್ಷರಿಗೆ, ಮೀಡಿಯಾ ಮತ್ತು ಚಿತ್ರೋದ್ಯಮದವರಿಗೆ ತೋರಿಸಲಾಯಿತು.

Mynaa-Audio-released

Mynaa-Audio-released

ಚಿತ್ರದ ಮೂರು ಹಾಡುಗಳಾದ ಮರೆಯದ ಮಳೆಯಂತೆ, ಟೈಟಲ್ ಹಾಡು ಮೈನಾ ಮತ್ತೊಂದು ಸುಮನ್ ರಂಗನಾಥ್‌ರನ್ನೊಳಗೊಂಡ ಐಟಂ ಹಾಡನ್ನು ಪ್ರೇಕ್ಷಕರಿಗೆ ಕೇಳಿಸಲಾಯಿತು. ಇದರ ಜೊತೆಗೆ ಚಿತ್ರದ ಅಧಿಕೃತ ಟ್ರೈಲರ್‌ನ್ನು ತೋರಿಸಲಾಯಿತು. ಇದಲ್ಲದೆ, ಮತ್ತೊಂದು ವಿಶೇಷ ಎಂದರೆ, ಚಿತ್ರದ ತಯಾರಿಕೆಯ ವೀಡಿಯೋವನ್ನು ತೋರಿಸಲಾಯಿತು.

ಮೈನಾ ಚಿತ್ರದ ಹೀರೋಯಿನ್ ನಿತ್ಯಾ ಮೆನನ್‌ರನ್ನು ಹೊರತುಪಡಿಸಿ, ಚಿತ್ರದ ಸಂಪೂರ್ಣ ತಂಡ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಮಲಯಾಳಂನ ಚಿತ್ರವೊಂದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ನಿತ್ಯಾ ಮೆನನ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಮಾರಂಭದಲ್ಲಿ ಪಾಲ್ಗೊಂಡ ಚಿತ್ರತಂಡದ ಮುಖ್ಯರಲ್ಲಿ ನಿರ್ದೇಶಕ ನಾಗಶೇಖರ್, ಹಿನ್ನೆಲೆ ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟ ಅರುಣ್ ಸಾಗರ್, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್, ಛಾಯಾಗ್ರಾಹಕ ಸತ್ಯ ಹೆಗ್ಡೆ ಮುಂತಾದವರೂ.

[ad_468x60]

ಚಿತ್ರದ ಹೀರೋ ಚೇತನ್, ನಟ ರವಿಶಂಕರ್, ನೃತ್ಯ ನಿರ್ದೇಶಕ ಇಮ್ರಾನ್, ನಿರ್ಮಾಪಕರುಗಳಾದ ಸುಧೀಂದ್ರ, ಕೆ. ಪಿ. ಶ್ರೀಕಾಂತ್, ಆರ್. ಶ್ರೀನಿವಾಸ್, ಚೇತನ್, ಭಾಸ್ಕರ್, ಕಿಶೋರ್, ಕೆ. ಮಂಜು, ರಮೇಶ್ ಯಾದವ್, ನಿರ್ದೇಶಕರುಗಳಾದ ಎ. ಪಿ. ಅರ್ಜುನ್, ಕ್ರೇಜಿ ಮೈಂಡ್ಸ್‌ನ ಶ್ರೀ ಮುಂತಾದವರುಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ಡಿಸ್ಟ್ರಿಬ್ಯೂಟರ್ ಬಾಷಾ ಮತ್ತು ಚಿತ್ರಕ್ಕೆ ಕಥೆಯನ್ನು ಒದಗಿಸಿದ ನಿವೃತ್ತ ಪೋಲೀಸ್ ಅಧಿಕಾರಿ ಬಿ. ಬಿ. ಅಶೋಕ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿತ್ರದ ಟೈಟಲ್ ಹಾಡು ನಿಮ್ಮಗಳ ಕಿವಿಯನ್ನು ಇಂಪು ಮಾಡುವುದಕ್ಕೆ ಇಲ್ಲಿದೆ ಕೇಳಿ ಆನಂದಿಸಿ. ಚಿತ್ರದ ಉಳಿದ ಹಾಡುಗಳನ್ನು ಅತೀ ಶೀಘ್ರದಲ್ಲೆ ಕೇಳಿಸಲಾಗುವುದು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech