Close X

ಎಲೆಕ್ಷನ್ ಕಮೀಷನರ್‌ರಾಗಿ ಮಾಲಾಶ್ರೀ

ಬೆಂಗಳೂರಿನ ಬಸ್ ಸ್ಟಾಂಡ್ ಹತ್ತಿರ ಸಿಟಿ ಸೆಂಟರ್ ಹೋಟೆಲ್‌ನಲ್ಲಿ ರಾಮು ಎಂಟರ್‌ಪ್ರೈಸಸ್ ನಿರ್ಮಾಣದ, ಮಾಲಾಶ್ರೀ ಅಭಿನಯದ, ಓಂ ಪ್ರಕಾಶ್ ರಾವ್ ನಿರ್ದೇಶನದ “ಎಲೆಕ್ಷನ್” ಚಿತ್ರದ ಮುಹೂರ್ತ ಸಮಾರಂಭ ಶನಿವಾರ ಬೆಳಗ್ಗೆ ನಡೆಯಿತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡಿದ ಕೂಡಲೇ ಶೂಟಿಂಗ್ ಆರಂಭಿಸಿದರು ಓಂ ಪ್ರಕಾಶ್ ರಾವ್.  ಈ ಶೂಟಿಂಗ್‌ನಲ್ಲಿ ಹಲವಾರು ಜೂನಿಯರ್ ಮತ್ತು ಸೀನಿಯರ್ ಆರ್ಟಿಸ್ಟ್‌ಗಳು ಭಾಗವಹಿಸಿದರು.

election-in-rao-and-malasri-combinationಹತ್ತಾರು ಚಿತ್ರಗಳಲ್ಲಿ ಮಾಲಾಶ್ರೀ ಪೋಲೀಸ್ ಪಾತ್ರಗಳಲ್ಲಿ ಮಿಂಚಿದ್ದು ಇತಿಹಾಸವಾದರೆ, ಅದೇ ರೀತಿಯ ಪೋಲೀಸ್ ಅಲ್ಲದ, ಆದರೆ ಅದೇ ಗತ್ತು ಗಮ್ಮತ್ತಿರುವ ಪಾತ್ರವನ್ನು ಮಾಡುತ್ತಿದ್ದಾರೆ. ಅದೇ ಎಲೆಕ್ಷನ್ ಕಮೀಷನರ್ ಪಾತ್ರ. ಟಿ. ಎನ್. ಶೇಷನ್‌ರ ನಿಜ ಜೀವನ ಆಧಾರಿತ ಕಥೆಯಾಗಿದ್ದು, ಅವರು ಎಲೆಕ್ಷನ್ ಕಮೀಷನರ್ ಆಗಿದ್ದಾಗ ಕಂಡಂತ ಅನುಭವಗಳು ಚಿತ್ರದ ಕಥೆಯಾಗಿದೆ ಎಂದರು ಓಂ ಪ್ರಕಾಶ್ ರಾವ್.

ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರ ಖ್ಯಾತಿಯ ಗುರುಪ್ರಸಾದ್ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಹಂಸಲೇಖ ಸಂಗೀತ ಒದಗಿಸುತ್ತಿದ್ದಾರೆ. ಈಗಾಗಲೇ ಐದು ಹಾಡುಗಳ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ ಹಂಸಲೇಖ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech