Close X

ಬೆಂಗಳೂರಿನ ಜನಪ್ರಿಯ ಪಲ್ಲವಿ ಚಿತ್ರಮಂದಿರ ಇನ್ನೆಂದು ಪ್ರದರ್ಶನ ಕಾಣುವುದಿಲ್ಲ

ಬೆಂಗಳೂರಿನ ಜನಪ್ರಿಯ ಚಿತ್ರಮಂದಿರ – ಪಲ್ಲವಿ ಈ ವರ್ಷ ಡಿ. 20ರಂದು ಕೊನೆಯ ಶೋ ನೀಡುವುದರಿಂದ ಬೆಂಗಳೂರಿನಲ್ಲಿ ಚಿತ್ರಮಂದಿರಗಳ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಕಾರ್ಪೊರೇಷನ್ ಸರ್ಕಲ್‌ನಲ್ಲಿರುವ ಈ ಚಿತ್ರಮಂದಿರ ಬಸ್ ಪ್ರಯಾಣಿಕರಿಗೆ ಇಳಿಯುವ ಸ್ಥಳದ ಹೆಸರೂ ಕೂಡ. ಕಂಡೆಕ್ಟರ್‌ಗೆ ಪಲ್ಲವಿ ಸ್ಟಾಪ್ ಅಂದ್ರೆ ಸಾಕು. ಅಂತಹದೊಂದು ಐತಿಹಾಸಿಕ ಜಾಗ ಕಣ್ಮರೆಯಾಗಲಿದೆ.

ಈ ಜಾಗದಲ್ಲಿ ದೊಡ್ಡದೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತಲೆಯೆತ್ತಲಿದ್ದು, ಇದೇ ಹೆಸರನ್ನು ಉಳಿಸಿಕೊಳ್ಳಲಿದೆಯಂತೆ.

Bangalore famous Pallavi Theatre Closes Down

Bangalore famous Pallavi Theatre Closes Down

ಬೆಂಗಳೂರಿನ A/C ಚಿತ್ರಮಂದಿರಗಳಲ್ಲಿ ಇದೂ ಒಂದು ಪ್ರಮುಖ ಚಿತ್ರಮಂದಿರ. 1200 ಜನ ಒಮ್ಮೆಲೆ ಕೂತು ಪ್ರದರ್ಶನವನ್ನು ವೀಕ್ಷಿಸಬಹುದಾದ ದೊಡ್ಡ ಚಿತ್ರಮಂದಿರ. ಗೌತಮ್ ಮೆನನ್‌ರ “ನೀಥಾನೇ ಎನ್ ಪೊನ್ ವಸಂತಂ” ಚಿತ್ರವು ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಕೊನೆಯ ಚಿತ್ರವಾಗಿದೆ.

ಈ ಚಿತ್ರಮಂದಿರವನ್ನು ಕನ್ನಡ ವರನಟ ಡಾ. ರಾಜ್‌ಕುಮಾರ್ ಮಾರ್ಚ್ 6 1976ರಲ್ಲಿ ಉದ್ಘಾಟಿಸಿದ್ದರು. 36 ವರ್ಷಗಳ ಸುದೀರ್ಘ ಕಾಲದಲ್ಲಿ 400ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನವನ್ನು ಕಂಡಿದೆ ಈ ಚಿತ್ರಮಂದಿರ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech