Close X

ಅಮೇರಿಕಾದಲ್ಲೂ ಯೋಗರಾಜ್ ಭಟ್‌ರ ಡ್ರಾಮಾ ನಡೆಯಲಿದೆ !

ಯೋಗರಾಜ್ ಭಟ್ ನಿರ್ದೇಶನದ ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಡ್ರಾಮಾ ಚಿತ್ರವು ರಾಜ್ಯಾದ್ಯಂತ 5ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖುಷಿಯಲ್ಲೇ ಮತ್ತೊಂದು ಸಂತಸದ ಸುದ್ದಿಯೆಂದರೆ, ಅಮೇರಿಕಾದಲ್ಲೂ ಬಿಡುಗಡೆ ಯಾಗುತ್ತಿದೆ. ನಿರ್ಮಾಪಕ ಅಟ್ಲಾಂಟಾ ನಾಗೇಂದ್ರ ಅಮೇರಿಕಾದಲ್ಲಿ ವಿವಿಧ ಕಡೆ ಬಿಡುಗಡೆಗೊಳಿಸುವ ವ್ಯವಸ್ಥೆಯಲ್ಲಿ ತೊಡಗಿದ್ದಾರೆ. ಈ ಮೊದಲು ತಮ್ಮದೇ ನಿರ್ಮಾಣದಲ್ಲಿ ಬಂದ Rambo ಚಿತ್ರವನ್ನು ಅಮೇರಿಕಾದಲ್ಲಿ ಬಿಡುಗಡೆ ಗೊಳಿಸಿದ್ದರು.

Yograj bhat's Drama movie poster

Yograj bhat's Drama movie poster

ಜನವರಿ 4ರಂದು ರಾತ್ರಿ 8:00 PM ಕ್ಯಾಲಿಫೋರ್ನಿಯಾದ ಮಿಲ್ಟಿಪ್ಲಾಸ್‍ನ ಸೆರಾನಲ್ಲಿ ಮೊದಲ ಪ್ರದರ್ಶನವನ್ನು ಕಾಣಲಿದೆ. ಮುಂದುವರಿದು ಜನವರಿ 5 ಮತ್ತು 6 ರಂದು (ಶನಿವಾರ ಮತ್ತು ಭಾನುವಾರ) ಪ್ರತಿದಿನ ಎರಡು ಶೋಗಳಂತೆ(2:30 PM and 5:30 PM) ಪ್ರದರ್ಶನಗೊಳ್ಳಲಿದೆ.

ಮುಂದೆ ಚಿತ್ರವನ್ನು ಲಾಸ್ ಏಂಜಲೀಸ್, ಆಸ್ಟಿನ್, ಡಲ್ಲಾಸ್, ಹೌಸ್ಟನ್, ನ್ಯೂಯಾರ್ಕ್, ಸಿಯಾಟಲ್ ಮತ್ತು ನ್ಯೂಜೆರ್ಸಿಗಳಲ್ಲು ಬಿಡುಗಡೆಗೊಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech