Close X

ಈ ವಾರ ಪುನೀತ್ ಫ್ಯಾನ್ಸ್‌ಗೆ ಹಬ್ಬ – ಯಾರೇ ಕೂಗಾಡಲಿ ಡಿ. 20ಕ್ಕೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‍ ಅಭಿಮಾನಿಗಳಿಗೆ ಈ ವಾರ ವಿಶೇಷ ಹಬ್ಬ. ಪುನೀತ್ ರಾಜ್‌ಕುಮಾರ್‍‌ರ ಬಹುನಿರೀಕ್ಷೆಯ ಸಮುತ್ತಿರಖಣಿ ನಿರ್ದೇಶನದ ಯಾರೇ ಕೂಗಾಡಲಿ ಚಿತ್ರವು ಇದೇ ವಾರ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ. ಕಳೆದ ಗುರುವಾರ ಸೆನ್ಸಾರ್ ಬೋರ್ಡ್‌‌ನವರು ಚಿತ್ರವನ್ನು ವೀಕ್ಷಿಸಿ U/A ಸರ್ಟಿಫಿಕೇಟ್‌ನ್ನು ಕೊಟ್ಟಿದ್ದಾರೆ.

yaare-koogadali-kannada-movie-release

yaare-koogadali-kannada-movie-release

ತಮಿಳಿನ ಹಿಟ್ ಚಿತ್ರ ಪೋರಾಳಿಯ ರೀಮೇಕ್ ಆಗಿರುವ ಯಾರೇ ಕೂಗಾಡಲಿ ಚಿತ್ರವು ಪೂರ್ಣಿಮಾ ಪ್ರೋಡಕ್ಷನ್‌ನಡಿಯಲ್ಲಿ ಮೂಡಿಬಂದಿದೆ. ತಮಿಳಿನಲ್ಲೂ ಪೋರಾಳಿಯನ್ನು ನಿರ್ದೇಶಿಸಿದ ಸಮುತ್ತಿರಖಣಿ, ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಪುನೀತ್‌ಗೆ ಆಕ್ಷ್ಯನ್ ಕಟ್ ಹೇಳುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಪುನೀತ್, ಲೂಸ್ ಮಾದಾ ಯೋಗಿ, ಭಾವನ, ಸ್ಮಿತಾ, ರವಿಶಂಕರ್, ಮಾಳವಿಕಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಹರಿಕೃಷ್ಣರ ಸಂಗೀತ, ತಮಿಳಿನ ಮೈನಾ ಖ್ಯಾತಿಯ ಛಾಯಾಗ್ರಾಹಕ ಸುಕುಮಾರ್‌ರ ಛಾಯಾಗ್ರಹಣ ಚಿತ್ರಕ್ಕಿದೆ. ತೆಲುಗಿನ ಚಾರ್ಮಿ ಒಂದು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ ಎಂದು ವಜ್ರೇಶ್ವರಿ ಕಂಬೈನ್ಸ್ ತಿಳಿಸಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech