Close X

ವಿಶೇಷ ಮತ್ತು ವಿಭಿನವಾಗಿ ಚಾರ್‍ಮಿನಾರ್ ಚಿತ್ರದ ಆಡಿಯೋ ಬಿಡುಗಡೆ

ನಿರ್ಮಾಪಕ ಆರ್. ಚಂದ್ರುರ ಚೊಚ್ಚಲ ನಿರ್ದೇಶನದ, ನೆನಪಿರಲಿ ಪ್ರೇಮ್ ಮತ್ತು ಮೇಘನ ಗಾಂವಕರ್ ಅಭಿನಯದ “ಚಾರ್‌ಮಿನಾರ್” ಚಿತ್ರದ ಧ್ವನಿಸುರಳಿಯು ವಿಭಿನ್ನ ರೀತಿಯಲಿ ಬಿಡುಗಡೆಗೊಂಡಿತು. ಆ ವಿಭಿನ್ನ ರೀತಿ ಏನೆಂದು ಯೋಚಿಸುತ್ತಿದ್ದೀರಾ ?

ಅದೇ, ಚಂದ್ರುರ ಚಿಕ್ಕಂದಿನಿಂದ ಇಲ್ಲಿಯವರೆಗೆ ಎಲ್ಲ ವರ್ಗದಲ್ಲೂ ಪಾಠ ಹೇಳಿಕೊಟ್ಟ ಗುರುಗಳಿಂದಲೆ ಚಿತ್ರದ ಧ್ವನಿಸುರಳಿಯನ್ನು ಬಿಡುಗಡೆ ಗೊಳಿಸಲಾಯಿತು ಮತ್ತು ಆ ಎಲ್ಲಾ ಗುರುಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.

salute-to-teachers-at-charminar-audio

salute-to-teachers-at-charminar-audio

“ನನ್ನ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಹೇಳಿಕೊಟ್ಟವರು ಈ ನಮ್ಮ ಗುರುಗಳು. ಈ ಎಲ್ಲಾ ಗುರುಗಳು ಮಾದರಿ ಗುರುಗಳು. ನನ್ನ ಚಿತ್ರ ಚಾರ್‌ಮಿನಾರ್ ನಲ್ಲೂ ಕೂಡ ಶಿಕ್ಷಕರ ಬಗ್ಗೆ ಒಳ್ಳೆಯ ಸಂದೇಶವನ್ನು ತೋರಿಸುತ್ತಿದ್ದೇನೆ. ಶಿಕ್ಷಕರು ನಮ್ಮ ಸಮಾಜದ ಆದಾರ ಸ್ತಂಭ. ಅವರು ಗೌರವಿಸುವ ಭಾಗ್ಯ ದೊರೆತಿದ್ದು ನನ್ನ ಪುಣ್ಯ” ಎಂದು ಭಾವೋದ್ವೇಗವಾಗಿ ತಿಳಿಸಿದರು ಚಂದ್ರು.

ಈ ಚಿತ್ರದೊಂದಿಗೆ ಹೊಸ ಪ್ರತಿಭೆ ಹರಿ ಎಂಬ ಸಂಗೀತ ನಿರ್ದೇಶಕನನ್ನು ಪರಿಚಯಿಸುತ್ತಿದ್ದೇನೆ. ಸಂಗೀತ ನಿರ್ದೇಶಕ ಗುರುಕಿರಣ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದು ಅವರಿಗೆ ಚಿರಖುಣಿ ಎಂದರು ಚಂದ್ರು.

ಚಿಕ್ಕಬಳ್ಳಾಪುರದ ಜಿಲ್ಲೆಯ ನಾನಾ ಊರುಗಳಿಂದ ಚಂದ್ರುನ ಬಾಲ್ಯದ ಆತ್ಮೀಯ ಸ್ನೇಹಿತರುಗಳು ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಸ್ನೇಹಿತನಿಗೆ ಶುಭಕೋರಿದರು.

ಇಂತಹ ಉತ್ತಮ ಪಾತ್ರ ಕೊಟ್ಟಿದಕ್ಕೆ ಮೇಘನ ಗಾಂವಕರ್ ಚಂದ್ರುವಿಗೆ ಧನ್ಯವಾದಗಳನ್ನು ಅರ್ಪಿಸಿದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech