Close X

ಕೊನೆಗೂ ಪ್ರೇಮ್‌ ಅಡ್ಡ ತೆರೆಗೆ

“ಪ್ರೀತಿ ಏಕೆ ಭೂಮಿ ಮೇಲಿದೆ” ಚಿತ್ರದ ನಂತರ ನಿರ್ದೇಶಕ ಪ್ರೇಮ್ ನಟಿಸಿರುವ “ಪ್ರೇಮ್ ಅಡ್ಡ” ಈ ವಾರ ತೆರೆಗೆ ಬರುತ್ತಲಿದೆ. ಡಿಸೆಂಬರ್‌ನ ಮೊದಲ ವಾರದಲ್ಲಿ ಬಿಡುಗಡೆಗೊಳ್ಳುತ್ತಿರುವ ಏಕೈಕ ಕನ್ನಡ ಚಿತ್ರ ಪ್ರೇಮ್ ಅಡ್ಡ. ಎಲ್ಲರಿಗೂ ಗೊತ್ತಿರುವಂತೆ, ಈ ಚಿತ್ರ ತಮಿಳಿನ ಹಿಟ್ ಚಿತ್ರ “ಸುಬ್ರಹ್ಮಣ್ಯಪುರಂ”ನ ರೀಮೇಕ್ ಆಗಿದ್ದು, ಪ್ರೇಮ್ ಅಡ್ಡ ಟೈಟಲ್‌ನೊಂದಿಗೆ ಬಾರಿ ವಿವಾದಕ್ಕೊಳಗಾಗಿತ್ತು. ಕೊನೆಗೂ ಎಲ್ಲಾ ಅಡೆ ತಡೆಗಳನ್ನು ದಾಟಿ ಬಿಡುಗಡೆಯ ಹಂತ ತಲುಪಿದೆ ಪ್ರೇಮ್ ಅಡ್ಡ.

Prem-Adda-Kannada-Movie-releaseತಮಿಳಿನಲ್ಲಿ ಹಿಟ್ ಚಿತ್ರವಾದ ಕಾರಣ, ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆಯಿರುತ್ತೆ. ವಿ. ಹರಿಕೃಷ್ಣರ ಸಂಗೀತವಿರುವ ಪ್ರೇಮ್ ಅಡ್ಡದ ಆಡಿಯೋ ಹಿಟ್ ಆಗುವ ಮೂಲಕ ಆ ನಿರೀಕ್ಷೆಯ ಒಂದು ಹಂತವನ್ನು ಚಿತ್ರ ಯಶಸ್ವಿಯಾಗಿ ಪಾರುಮಾಡಿದೆ. ಆದರೆ, ಹಿಂದೆ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದೊಂದಿಗೆ ಫ್ಲಾಪ್ ಆದ ಪ್ರೇಮ್ ಹಲವು ವರ್ಷಗಳ ನಂತರ ನಟಿಸಿದ್ದಾರೆ. ಪ್ರೇಕ್ಷಕರೆಲ್ಲರೂ ಚಿತ್ರ ಹೇಗೆ ಮೂಡಿಬಂದಿದೆ, ಮತ್ತು ಪ್ರೇಮ್‌ರ ನಟನೆಯ ಭವಿಷ್ಯ ಏನಾಗತ್ತೆ ಎಂದು ಬಹು ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಪ್ರೇಮ್ ಅಡ್ಡ ಚಿತ್ರದಲ್ಲಿ ಸುಂದರ ನಟಿ ಕೃತಿ ಖರಬಾಂಡಾ ನಟಿಸಿದ್ದು, ಚಿತ್ರದ ನಿರ್ಮಾಪಕ ಮೇಕ ಮುರಳಿ ಕೃಷ್ಣ ಕೂಡ ನಟಿಸಿದ್ದಾರೆ. ಪ್ರೇಮ್ ಅಡ್ಡ ಚಿತ್ರವು ಇದೇ ವರ್ಷ ಸಂಕ್ರಾಂತಿಯಂದು ಶುರುವಾಗಿದ್ದು, ಇನ್ನೂ ಮುಂದಿನ ಸಂಕ್ರಾಂತಿಗೆ ಒಂದೂವರೆ ತಿಂಗಳು ಬಾಕಿ ಇರುವಂತೆಯೆ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ. ಯಶಸ್ವಿ ನಿರ್ದೇಶಕ ಮಹೇಶ್ ಬಾಬು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಅದೇನೇ ಇರಲಿ ಕನ್ನಡ ಚಿತ್ರವೊಂದು ಹಿಟ್ ಆಗಲಿ ಎಂದು ಹಾರೈಸುವ ಕನ್ನಡಹನಿಗಳ ಬಳಗ.

Listen to the Latest Hit Tracks of Prem Adda Below :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech