Close X

ಶಿವರಾಜ್‌ಕುಮಾರ್ ಮತ್ತು ಪಾರ್ವತಿ ಮೆನನ್ ಒಳಗೊಂಡ ಹಾಡಿನ ಚಿತ್ರೀಕರಣ

ಶಿವರಾಜ್‌ಕುಮಾರ್ ಮತ್ತು ಪಾರ್ವತಿ ಮೆನನ್ ಇರುವ ಅಂದರ್ ಬಾಹರ್ ಚಿತ್ರದ ಪರಿಚಯದ ಹಾಡಿನ ಚಿತ್ರೀಕರಣವು ಇತ್ತೀಚೆಗೆ ನಡೆಯಿತು. ಹಾಡಿನ ಚಿತ್ರೀಕರಣವನ್ನು ನೈಸ್ ರಸ್ತೆ ಮತ್ತು ಇತರೆ ಸೆಟ್‌ಗಳಲ್ಲಿ ಶೂಟಿಂಗ್ ಮಾಡಲಾಯಿತು. ಎಲ್ಲಾ ಹಾಡುಗಳ ಚಿತ್ರೀಕರಣವನ್ನು ಮುಗಿಸಲು ನಿರ್ದೇಶಕ ಫಣೀಶ್ ಗಮನ ಹರಿಸುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ಪ್ರಕಾಶ್‌ರ ಸಂಗೀತವಿದೆ.

Andar Bahar Song Picturisation

Andar Bahar Song Picturisation

ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಮೈಸೂರ್ ಲ್ಯಾಂಪ್ಸ್‌ನಲ್ಲಿ ಸ್ಪೆಷಲ್ ಸೆಟ್ಟೊಂದನ್ನು ಸ್ಥಾಪಿಸಲಾಗಿದೆ. ಇದಲ್ಲದ್ದೆ ಹೆಸರಘಟ್ಟದಲ್ಲಿರುವ ಆಚಾರ್ಯ ಕಾಲೇಜು, ನೈಸ್ ರಸ್ತೆ ಮತ್ತು ಅಬ್ಬಯ್ಯ ನಾಯ್ಡು ಸ್ಟೂಡಿಯೋನಲ್ಲೂ ಹಾಡಿನ ಚಿತ್ರೀಕರಣವನ್ನು ನಡೆಸಲಾಗಿದೆ. ಈ ಹಾಡಿನ ಚಿತ್ರೀಕರಣವನ್ನು ಮೊದಲು ಐದು ದಿನಗಳಿಗೆ ಯೋಜಿಸಲಾಗಿತ್ತು. ಆದರೆ ಅಬ್ಬಯ್ಯ ನಾಯ್ಡು ಸ್ಟೂಡಿಯೋದಲ್ಲಿ ಸ್ಪೆಷಲ್ ಲೈಟಿಂಗ್ ಎಫೆಕ್ಟ್ ಬೇಕಾಗಿರುವ ಕಾರಣ, ಇನ್ನೂ ಕೆಲವು ದಿನಗಳು ಮುಂದೂಡಲಾಗಿದೆ.

50 ಲಕ್ಷಕ್ಕೂ ಹೆಚ್ಚು ಹಣವನ್ನು ಹಾಡಿನ ಚಿತ್ರೀಕರಣಕ್ಕೆ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech