Close X

“ಯಾರೇ ಕೂಗಾಡಲಿ” ಡಿಸೆಂಬರ್‌ನಲ್ಲಿ

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ “ಯಾರೇ ಕೂಗಾಡಲಿ” ಚಿತ್ರದ ಚಿತ್ರೀಕರಣವು ಸತತವಾಗಿ ಮುನಡೆಯುತ್ತಿದ್ದು, ಚಿತ್ರದ ಧ್ವನಿಸುರಳಿ ಮತ್ತು ಚಿತ್ರ ಬಿಡುಗಡೆಯ ದಿನಾಂಕಗಳು ಬಹುತೇಕ ಖಚಿತವಾಗಿದೆ. ಚಿತ್ರ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ರಾಘವೇಂದ್ರ ರಾಜ್‌ಕುಮಾರ್ ಚಿತ್ರದ ಧ್ವನಿಸುರಳಿಯನ್ನು ಇದೇ ನವೆಂಬರ್ 26ಕ್ಕೆ ಬಿಡುಗಡೆ ಗೊಳಿಸಲಾಗುವುದೆಂದು ಹಾಗೂ ಚಿತ್ರವನ್ನು ಮುಂದಿನ ತಿಂಗಳು ಡಿಸೆಂಬರ್ 20ಕ್ಕೆ ಬಿಡುಗಡೆಯಾಗಲಿದೆ ಎಂದು ಖಚಿತ ಪಡಿಸಿದ್ದಾರೆ.

Yaare_koogadali_release_dates

“ಯಾರೇ ಕೂಗಾಡಲಿ” ಚಿತ್ರವನ್ನು ಸಮುದ್ರ ಖಣಿ ನಿರ್ದೇಶಿಸುತ್ತಿದ್ದು, ಅವರಿಗೆ ಸುಕುಮಾರ್ (ತಮಿಳಿನ ಮೈನಾ ಖ್ಯಾತಿ) ಛಾಯಾಗ್ರಹಣದೊಂದಿಗೆ ಸಾಥ್ ನೀಡುತ್ತಿದ್ದಾರೆ. “ಮಠ” ಚಿತ್ರದ ಗುರುಪ್ರಸಾದ್ ಸಂಭಾಷಣೆಯಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ, ಜಾಕ್ಸನ್ (ಪರುತ್ತಿ ವೀರನ್ ಖ್ಯಾತಿ) ಕಲೆ, ದೀಪು. ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಇದೆ.

ಚಿತ್ರದ ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ಯೋಗೀಶ್, ಭಾಮಾ, ಗಿರೀಶ್ ಕಾರ್ನಾಡ್, ಹುಲಿವಾನ ಗಂಗಾಧರಯ್ಯ, ಸಾಧು ಕೋಕಿಲ, ಶೋಭರಾಜ್, ಚಾರ್ಮಿ, ಸಿಂಧು, ನಾಗೇಂದ್ರ, ಆಶಾರಾಣಿ, ಮೈಕೋ ನಾಗರಾಜ್, ರವಿಶಂಕರ್, ಅಚ್ಯುತ್ ಕುಮಾರ್ ಮುಂತಾದವರು ಇದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech