Close X

ನವೆಂಬರ್ 30ರಂದು ಎಲ್ಲೆಡೆ “ಯಾರೇ ಕೂಗಾಡಲಿ”ಯ ಗುನುಗು

ಪುನೀತ್ ರಾಜ್‌ಕುಮಾರ್‌ರ ಅತೀ ನಿರೀಕ್ಷೆಯ ಚಿತ್ರ “ಯಾರೇ ಕೂಗಾಡಲಿ”ಯ ಧ್ವನಿಸುರಳಿಯು ಇದೇ ನವೆಂಬರ್ 30ರಂದು ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಗೊಳ್ಳಲಿದೆ.ಲೂಸ್ ಮಾದಾ ಯೋಗಿ ಮತ್ತು ಭಾವನ ಪುನೀತ್‌ರ ಜೊತೆ ಮುಖ್ಯಭೂಮಿಕೆಯಲ್ಲಿದ್ದು ಶನಿವಾರ ಡಿಸೆಂಬರ್ ೧ರಂದು ರಾಜ್ಯಾದ್ಯಂತ ಎಲ್ಲ ಕಡೆಗಳಲ್ಲಿ ಸಿಗಲಿದೆ. ತಾತ್ಕಾಲಿಕವಾಗಿ ಚಿತ್ರವನ್ನು ಡಿ. ೨೦ಕ್ಕೆ ಬಿಡುಗಡೆ ಗೊಳಿಸಲು ಎಲ್ಲ ತಯಾರಿಯು ನಡೆಯುತ್ತಿದ್ದು, ಅಬ್ಬಾಬ್ಬಾ ಎಂದರೆ ಒಂದುವಾರ ತಳ್ಳಲ್ಪಡಬಹುದು.

yaare-koogadali-audio-releaseಚಿತ್ರವನ್ನು ತಮಿಳು ಖ್ಯಾತಿಯ ನಿರ್ದೇಶಕ ಸಮ್ಮುತ್ತಿರಖಣಿ ನಿರ್ದೇಶಿಸುತ್ತಿದ್ದು, ಈ ಮೊದಲು ಪೋರಾಳಿ ಮತ್ತು ನಾಡೋಡಿಗಳಲ್ ನಂತಹ ಹಿಟ್ ಚಿತ್ರವನ್ನು ಕೊಟ್ಟಿದ್ದಾರೆ. ಯಾರೇ ಕೂಗಾಡಲಿ ಚಿತ್ರವು ತಮಿಳಿನ ಹಿಟ್ ಚಿತ್ರ ಪೋರಾಳಿಯ ರೀಮೇಕ್ ಆಗಿದ್ದು, ತಮಿಳಿನಂತೆಯೇ, ಕನ್ನಡದಲ್ಲೂ ಹಿಟ್ ಆಗುವ ಆಶಯವಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಈ ಮೊದಲು ಇದೇ ನಿರ್ದೇಶಕರ ನಾಡೋಡಿಗಳ್ ಚಿತ್ರವನ್ನು ಕನ್ನಡದಲ್ಲಿ “ಹುಡುಗರು” ಚಿತ್ರವಾಗಿ ರೀಮೇಕ್ ಮಾಡಿ ದೊಡ್ಡ ಹಿಟ್ ಕಂಡಿತ್ತು. ಹುಡುಗರಲ್ಲೂ ಇದೇ ಪುನೀತ್ ಮತ್ತು ಲೂಸ್ ಮಾದಾ ಜೋಡಿ ಹಿಟ್ ಆಗಿದ್ದು ಈಗ ಇತಿಹಾಸ.

ಯೋಗರಾಜ್ ಭಟ್ ಮತ್ತು ಡಾ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡುಗಳಿಗೆ ಹರಿಕೃಷ್ಣ ಸಂಗೀತ ಒದಗಿಸಿದ್ದಾರೆ. ಹುಡುಗರು ಚಿತ್ರಕ್ಕೂ ಇದೇ ಹರಿಕೃಷ್ಣರ ಸಂಗೀತ ೨೦೧೧ ಹಿಟ್ ಹಾಡುಗಳಾಗಿ ಎಲ್ಲರ ಬಾಯಲ್ಲಿ ನಲಿದಾಡುತ್ತಿವೆ. ಚಿತ್ರಕ ಸಾಹಸ ಪ್ರದರ್ಶನವನ್ನು ರವಿವರ್ಮ ಒದಗಿಸಿದ್ದಾರೆ.

ಚಿತ್ರದ ಮೊದಲ ಟ್ರೀಲರ್ :

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech