Close X

ನವೆಂಬರ್ 7ಕ್ಕೆ ವರದನಾಯಕ ಚಿತ್ರದ ಧ್ವನಿಸುರಳಿ

ಚಿರಂಜೀವಿ ಸರ್ಜ್ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ “ವರದನಾಯಕ” ಚಿತ್ರದ ಧ್ವನಿ ಸುರಳಿ ನವೆಂಬರ್ 7ಕ್ಕೆ ಅಂದರೆ ಇಂದು ಬಿಡುಗಡೆಯಾಗುತ್ತಿದೆ. ಶುರುವಾದಾಗಿನಿಂದಲೂ ಈ ಚಿತ್ರವು ಎಲ್ಲರಲ್ಲಿ ಕುತೂಹಲವನ್ನು ಮೂಡಿಸಿದೆ. ಅದೇನೆಂದರೆ, ಮೊದಲಿಗೆ ಕಿಚ್ಚ ಸುದೀಪ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಸೆಕ್ಸಿ ಬಾಲಿವುಡ್ ನಟಿ ಸಮೀರಾ ರೆಡ್ಡಿ ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಮತ್ತೊಬ್ಬ ವಿದೇಶಿ ಬೆಡಗಿ ನಿಕೀಶಾ ಪಟೇಲ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶಂಕರೇ ಗೌಡ ನಿರ್ಮಿಸುತ್ತಿದ್ದು, ಅಯ್ಯಪ್ಪ ನಿರ್ದೇಶನದಲ್ಲಿ ಮಾಡಿಬರುತ್ತಿದ್ದೆ. ಚಿತ್ರಕ್ಕೆ ಇತ್ತೀಚಿನ ಹಿಟ್ ಸಂಗೀತ್ ನಿರ್ದೇಶಕ ಅರ್ಜುನ್ ಜನ್ಯ ಸಂಗೀತದ ಮಾಧುರ್ಯವನ್ನು ಹರಿಸಿದ್ದಾರೆ.

varadanayaka-audio-releaseಚಿತ್ರದ ತಯಾರಕರು ಶಂಕರೆ ಗೌಡ, ಚಿತ್ರದ ಧ್ವನಿ ಸುರಳಿಯನ್ನು ನವೆಂಬರ್ 7ಕ್ಕೆ ಅಂದರೆ ಇಂದು ಅದ್ದೂರಿಯಾಗಿ ಸಮಾರಂಭದಲ್ಲಿ ಬಿಡುಗಡೆ ಗೊಳಿಸಲಿದ್ದಾರೆ ಮತ್ತು ಚಿತ್ರವನ್ನು ನವೆಂಬರ್ 23ಕ್ಕೆ ಬಿಡುಗಡೆ ಗೊಳಿಸಲು ತಿರ್ಮಾನಿಸಿದರೆ. “ಅಯ್ಯಪ್ಪ ಶರ್ಮರವರು ಚಿತ್ರಕ್ಕೆ ಉತ್ತಮ ನಿರ್ದೇಶನವನ್ನು ಒದಗಿಸಿದ್ದಾರೆ. ಸುದೀಪ್ ಸರ್ ತಮ್ಮ ನೈಜ ಅದ್ಭುತ ನಟನೆಯನ್ನು ತೋರಿದ್ದಾರೆ, ಚಿರುಗೆ ಈ ಚಿತ್ರ ಬ್ರೆಕ್ ಕೊಡುವಂತ ಚಿತ್ರವಾಗಿದೆ. ಚಿರು ಜೊತೆಗೆ ಮತ್ತೊಂದು ಚಿತ್ರವನ್ನು ಮಾಡಲು ಎಲ್ಲಾ ತಯಾರಿಯನ್ನು ನಡೆಸುತ್ತಿದ್ದೇನೆ” ಎಂದರು ಶಂಕರೆ ಗೌಡ.

ವರದನಾಯಕ ಚಿತ್ರದ ರಿಲೀಸ್, ದರ್ಶನ ಅಭಿನಯದ “ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ” ಚಿತ್ರದ ಬಿಡುಗಡೆ ಜೊತೆಗೆ ಕ್ಯ್ಲಾಶ್ ಆಗದಿರುವ ಹಾಗೆ ತೀರ್ಮಾನಿಸಿದೆ. ಇದಕ್ಕೆ ಕಾರಣ ನಿಮಗೆಲ್ಲಾ ತಿಳಿದಿರುವಂತೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಗ್ ಸ್ಟಾರ್ ದರ್ಶನ್ ಎಷ್ಟು ಆತ್ಮೀಯರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech