Close X

ಕಂಠೀರವ ಸ್ಟೂಡಿಯೋದಲ್ಲಿ ಸೆಟ್ಟೇರಿದ ಪ್ರಚಂಡ ಚಿತ್ರ

ಸೋಮವಾರ ಬೆಳ್ಳಗ್ಗೆ ಮಹೇಶ್ ರಾವ್ ನಿರ್ದೇಶನದಲ್ಲಿ, ನಿರ್ಮಾಪಕ ಮತ್ತು ನಿರ್ದೇಶಕರುಗಳಾದ ಎಂ. ಎಸ್ ರಮೇಶ್ ಮತ್ತು ಯೋಗೇಶ್ ನಿರ್ಮಾಣದಲ್ಲಿ ಚಿತ್ರದ ಮುಹೂರ್ತ ಕಂಠೀರವ ಸ್ಟೂಡಿಯೋದಲ್ಲಿ ನಡೆಯಿತು. ಲೂಸ್ ಮಾದಾ ಖ್ಯಾತಿಯ ಯೋಗೇಶ್‌ಗೆ ಸಿಂಧು ಲೋಕನಾಥ್ ಜೋಡಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಮುಹೂರ್ತದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ, ಯೋಗೀಶ್ ಹುಣಸೂರು ಮತ್ತು ರಮೇಶ್, ನಿರ್ದೇಶಕರ ಯಾವುದೇ ನಿರ್ಧಾರಗಳಿಗೆ ಮತ್ತು ಅವರ ಕೆಲಸಗಳಿಗೆ ಅಡ್ಡವಾಗುವುದಿಲ್ಲ ಎಂದು ಭರವಸೆಯಿತ್ತರು. “ನಾವೂ ನಿರ್ದೇಶಕರಿರಬಹುದು, ಆದರೆ, ಪ್ರಚಂಡ ಚಿತ್ರಕ್ಕೆ ಸಂಬಂಧಿಸಿದಂತೆ ಅದು ಮಹೇಶ್ ರಾವ್‌ರ ಕೂಸು. ನಾವು ಅವರಿಗೆ ಎಲ್ಲಾ ವಿದದ ಸ್ವತಂತ್ರ್ಯವನ್ನು ಕೊಡುತ್ತೇವೆ”, ಎಂದರು ಯೋಗೀಶ್ ಹುಣಸೂರು ಮತ್ತು ರಮೇಶ್. ಈ ಮೊದಲು ಮಹೇಶ್ ರಾವ್ ಧಿಮಾಕು, ಮುರಳಿ ಮೀಟ್ಸ್ ಮೀರಾ, ಭದ್ರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Prachanda Kannda Movie Launch

ಪ್ರಚಂಡ ಚಿತ್ರಕ್ಕೆ ಗೌಸ್ ಪೀರ್ ಮತ್ತು ರಾಜು ಬೆಳಗೆರೆಯವರ ಚಿತ್ರಕಥೆಯಿದೆ. ಪ್ರಚಂಡ ಚಿತ್ರವು ಒಂದು ಆಧುನಿಕ ಹಳ್ಳಿಯಲ್ಲಿ ನಡೆಯುವ ಪ್ರೇಮ ಕಥೆಯ ಚಿತ್ರವಾಗಿದ್ದು, ಲೂಸ್ ಮಾದಾ ಯೋಗಿ ಬುದ್ದಿವಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಮೊದಲ ಹಂತದ ಚಿತ್ರದ ಶೂಟಿಂಗ್‌ನ್ನು ಕನಕಪುರದ ಸುತ್ತಮುತ್ತಲಲ್ಲಿ ನಡೆಸಲು ಮಹೇಶ್ ರಾವ್ ಯೋಜನೆಯನ್ನು ಹೊಂದಿದ್ದಾರೆ.

ಶ್ರೀಧರ್ ಸಂಭ್ರಮ್‌ರ ಸಂಗೀತವಿದ್ದು, ಜೈ ಆನಂದ್‌ರ ಛಾಯಾಗ್ರಹಣ ಚಿತ್ರಕ್ಕಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech