Close X

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರ ವಿಮರ್ಶೆ

ದೊಡ್ಡ ಬಜೆಟ್‌ನಲ್ಲಿ ತಯಾರಾದ ಐತಿಹಾಸಿಕ ಕಥೆಯುಳ್ಳ ಚಿತ್ರ ’ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ 135 ಥಿಯೇಟರುಗಳಲ್ಲಿ ಹೌಸ್‌ಫುಲ್ ಪ್ರದರ್ಶನದೊಂದಿಗೆ ಮೊದಲ ದಿನವೇ ಮೂರು ಕೋಟಿ ಬಾಚಿದೆ. ಬೆಂಗಳೂರಿನಲ್ಲಿ 35 ಥಿಯೇಟರುಗಳಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ಬಂದ ಕಿತ್ತೂರು ಚೆನ್ನಮ್ಮ, ಮಯೂರ, ಬಹದ್ದೂರ್ ಗಂಡು ನಂತಹ ಐತಿಹಾಸಿಕ ಹಿಟ್ ಚಿತ್ರಗಳ ಸಾಲಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರ ಕೂಡ ಸೇರುತ್ತೆ. ಸಂಗೊಳ್ಳಿ ರಾಯಣ್ಣ ಈ ಸಾಲಿನ ಉತ್ಕೃಷ್ಟ ಐತಿಹಾಸಿಕ ಚಿತ್ರ ಮಾತ್ರವಲ್ಲದೆ ಕಮರ್ಷಿಯಲ್ ಚಿತ್ರವಾಗಿ ಕೂಡ ಹೊರಹೊಮ್ಮಿದೆ. ಇದೊಂದು ಐತಿಹಾಸಿಕ ಚಿತ್ರವಾದರೂ ಇತಿಹಾಸದ ಪುಟಗಳು ಒಂದೊಂದಾಗಿ ಸರಿಯುತ್ತಿದ್ದಂತೆ ಸಾಮಾಜಿಕ, ಕೌಟುಂಬಿಕ, ರಾಯಕೀಯ ಚೌಕಟ್ಟಿನಲ್ಲಿ ಚಿತ್ರ ಸಾಗುತ್ತದೆ.

sangolli_rayannaಚಾಲೆಂಜಿಗ್ ಸ್ಟಾರ್ ದರ್ಶನ್ ಈ ಚಿತ್ರವನ್ನು ಚಾಲೆಂಜ್‌ಗಿ ತೆಗೆದುಕೊಂಡು ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ವೀರ ’ಸಂಗೊಳ್ಳಿ ರಾಯಣ್ಣ’ನಾಗಿ ಮಿಂಚಿದ್ದಾರೆ. ಚಿತ್ರದ ಮೊದಲಿನಿಂದ ಕೊನೆಯವರೆಗೂ ದರ್ಶನ್ ಆರ್ಭಟ ಜೋರಾಗಿಯೇ ಇದೆ.

ನಿರ್ದೇಶಕ ನಾಗಣ್ಣ ಚಿತ್ರದಲ್ಲಿನ ಯುದ್ದ ಸನ್ನಿವೇಶಗಳು ಬಹಳ ಚೆನ್ನಾಗಿ ಮೂಡಿಸಿದ್ದಾರೆ. ಚಿತ್ರವು ಐತಿಹಾಸಿಕವಾದರೂ, ರಸಿಕರನ್ನು ಆಕರ್ಷಿಸುವಲ್ಲಿ ಕೆಲವು ಕಮರ್ಷಿಯಲ್ ಅಂಶಗಳನ್ನು ಒಳಗೂಡಿಸಿದ್ದಾರೆ. ಉಮಾಶ್ರೀ ರಾಯಣ್ಣ ತಾಯಿ ಕೆಂಚವ್ವಳಾಗಿ ವೀರಾವೇಶದ ಅಭಿನಯವನ್ನು ತೋರಿದ್ದಾರೆ. ಕೆಂಚವ್ವ ಹಾಗೂ ರಾಯಣ್ಣನ ನಡುವಿನ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಕಣ್ನನ್ನು ಒದ್ದೆಯಾಗಿಸದೆ ಬಿಡದು.

ಕೇಶವಾದಿತ್ಯ ಚಿತ್ರಕ್ಕೆ ಉತ್ತರ ಕನ್ನಡ ಭಾಷೆಯಲ್ಲಿ ಸಂಭಾಷಣೆಯನ್ನು ಬರೆದಿರುವುದು ಹೈಲೈಟ್‍ಗಿದೆ. ಚಿತ್ರದಲ್ಲಿ ರಮೇಶ್ ಬಾಬು ಕ್ಯಾಮೆರಾ ಕೈಚಳಕ ಎತ್ತಿ ಕಾಣುತ್ತದೆ. ಯಶೋವರ್ಧನ್ ಅವರ ಸಂಗೀತದಲ್ಲಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಹೊಮ್ಮಿರುವ “ವೀರಭೂಮಿ” ಜನರನ್ನು ನವಿರೇಳಿಸುತ್ತದೆ.

ಚಿತ್ರದಲ್ಲಿ ಒಂದು ವಿಶೇಷ ಎಂದರೆ ಚಿತ್ರದ ನಾಯಕಿ ನಿಖಿತಾ ತುಕ್ರಲ್ (ಮಲ್ಲವ್ವ) ಅವರ ಪಾತ್ರ ಒಂದೇ ಒಂದು ಹಾಡಿಗಷ್ಟೇ ಸೀಮಿತವಾಗಿದೆ. ಇತರ ಪಾತ್ರವರ್ಗದಲ್ಲಿ ಶ್ರೀನಿವಾಸಮೂರ್ತಿ, ಸೌರವ್, ಧರ್ಮ, ಕರಿಬಸವಯ್ಯ, ಅವಿನಾಶ್ ರವರುಗಳು ಉತ್ತಮ ನಟನೆಯ ಕೌಶಲ್ಯವನ್ನು ತೋರಿದ್ದಾರೆ.

’ನೀಲಂ’ ಚಂಡಮಾರುತದಿಂದಾದ ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ಚಿತ್ರ ನೋಡಲು ಜನ ಸಾಗರ ಹರಿದು ಬರುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ರಾಯಣ್ಣ ಯಾರು, ಏನು, ಎತ್ತ ಎಂಬುದು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಕನ್ನಡ ಜನರು ಮಾಡಬೇಕಿದೆ. ಹಾಗಾಗಿ ಇಂದೇ ಕುಟುಂಬ ಸಮೇತ ಚಿತ್ರವನ್ನು ವೀಕ್ಷಿಸಿ ಕನ್ನಡದ ಭವ್ಯ ಪರಂಪರೆಯನ್ನು ತಿಳಿದುಕೊಳ್ಳಿ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech