Close X

ಬಂಗಾರಿಯ ಹಾಡುಗಳು ಇಂದಿನಿಂದ ಮಾರುಕಟ್ಟೆಯಲ್ಲಿ

ಲೂಸ್ ಮಾದಾ ಯೋಗಿ ಮತ್ತು ರಾಗಿಣಿ ದ್ವಿವೇದಿ ಜೋಡಿಯಾಗಿ ನಟಿಸಿರುವ “ಬಂಗಾರಿ” ಚಿತ್ರದ ಧ್ವನಿಸುರಳಿಯನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆಗೊಳಿಸಿದರು. ಆನಂದ್ ರಾವ್ ಸರ್ಕಲ್ ಬಳಿಯಿರುವ KEB ನೌಕರರ ಕಟ್ಟದಲ್ಲಿ ನಡೆದ ಸಮಾರಂಭದಲ್ಲಿ ಹಾಡುಗಳು ಮತ್ತು ಹೊಸ ಟ್ರೈಲರ್‌ನ್ನು ಬಿಡುಗಡೆ ಗೊಳಿಸಲಾಯಿತು. ಭೂಮಿಕ ಸ್ಟೂಡಿಯೋನಲ್ಲಿ ಚಿತ್ರದ ಹಾಡುಗಳ ರೀ-ರೆಕಾರ್ಡಿಂಗ್‌ನ್ನು ಮಾಡಲಾಗಿದ್ದು ಚಿತ್ರದ ಬಿಡುಗಡೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ನಿರ್ಮಾಪಕ ಎ. ಎಲ್ಲಪ್ಪ. ಎಲ್ಲಾ ಅಂದುಕೊಂಡಂತೆ ನಡೆದರೆ, ಚಿತ್ರವು ಡಿಸೆಂಬರ್‌ನಲ್ಲಿ ಬಿಡುಗಡೆಗೊಳ್ಳಲಿದೆ.
Bangari-audio-launch

ಸಮಾರಂಭದಲ್ಲಿ ಮತ್ತೊಬ್ಬ ಅತಿಥಿ ಶ್ರೀನಗರ ಕಿಟ್ಟಿ, ಚಿತ್ರದ ನಾಯಕ ಯೋಗೀಶ್, ನಾಯಕಿ ರಾಗಿಣಿ, ನಿರ್ದೇಶಕ ಮಾ. ಚಂದ್ರು, ಕನಕಪುರ ಶ್ರೀನಿವಾಸ್, ಕೆ. ಪಿ. ಶ್ರೀಕಾಂತ್, ಆರ್. ಎಸ್ ಗೌಡ ಮತ್ತಿತ್ತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಧ್ವನಿಸುರಳಿ ಬಿಡುಗಡೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಉಪೇಂದ್ರ, ನಿರ್ಮಾಪಕ “ಎಲ್ಲಪ್ಪ”ರನ್ನು ಅಭಿನಂದಿಸಿದರು ಮತ್ತು ಚಿತ್ರವು ಬಹಳಷ್ಟು “ಬಂಗಾರವನ್ನು” ನಿರ್ಮಾಪಕರಿಗೆ ತಂದುಕೊಡಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಚಿತ್ರದ ನಾಯಕಿ ರಾಗಿಣಿ ದ್ವಿವೇದಿ ಸುಂದರ ಸೀರೆ ಮತ್ತು ವಜ್ರದ ಉಂಗುರದಲ್ಲಿ ಹೊಳೆಯುತ್ತಿದ್ದರು. ಚಿತ್ರದ ಹಾಡುಗಳು ಮತ್ತು ಹಾಡಿನ ಚಿತ್ರೀಕರಣ ಚೆನ್ನಾಗಿ ಮಾಡಿಬಂದಿರುವುದಕ್ಕೆ ಸಂತೋಷ ಪಟ್ಟರು. “ಬಂಗಾರಿಗೆ ಪ್ರೀತಿ ಬಂದ್ರೆ” ಮತ್ತು “ನನ್ನ ಪ್ರೀತಿ ಪದ್ದು ಮೇಲೆ” ಹಾಡುಗಳು ಚಿತ್ರದಲ್ಲಿ ರಾಗಿಣಿಯ ನೆಚ್ಚಿನ ಹಾಡುಗಳಂತೆ ಮತ್ತು ಹಾಡಿನ ನೃತ್ಯ ಸಂಯೋಜನೆ ಕೂಡ ಚೆನ್ನಾಗಿ ಮೂಡಿ ಬಂದಿದೆಯಂದು ಖುಷಿಪಟ್ಟರು.

ಬಂಗಾರಿ ಚಿತ್ರಕ್ಕೆ ಸ್ವತಃ ಚಂದ್ರು ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಬಂಗಾರಿ ಒಂದು ಆಕ್ಷನ್ ಲವ್ ಸ್ಟೋರಿ ಎಂದು ವಿವರಿಸಿದರು. ಜಯಂತ್ ಕಾಯ್ಕಿಣಿ, ರಾಮ್‌ನಾರಾಯಣ್, ವಿಜಯ ಬರಮಸಾಗರ ರವರುಗಳು ಚಿತ್ರದ ಹಾಡುಗಳನ್ನು ಬರೆದಿದ್ದು, ಮಾಲೂರು ಶ್ರೀನಿವಾಸ್, ಕಂಬಿ ರಾಜು ಮತ್ತು ದೇವ ಸಂಪತ್ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

ಚಿತ್ರದ ಇತರೆ ತಾರಾಬಳಗದಲ್ಲಿ, ಸಾಧುಕೋಕಿಲ, ದಂಡಪಾಣಿ, ಸುಮನ್ ಶೆಟ್ಟಿ, ರಮೇಶ್ ಭಟ್, ಸ್ವಯಂವರ ಚಂದ್ರು, ಸತ್ಯಪ್ರಿಯ, ಶಂಕರ್ ಭಟ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech