Close X

ನವೆಂಬರ್ 1ಕ್ಕೆ ವರದನಾಯಕ ಬರಲಿದ್ದಾನೆ

Varadanayaka-kannada-movieಕಿಚ್ಚ ಸುದೀಪ್ ಅಭಿನಯದ ಚಿತ್ರ ವರದನಾಯಕ ನವೆಂಬರ್ 1ಕ್ಕೆ ಬಿಡುಗಡೆಗೊಳ್ಳಲಿದೆ. ವರದನಾಯಕ ತೆಲುಗಿನ “ಲಕ್ಷ್ಯಂ” ಚಿತ್ರದ ರೀಮೇಕ್ ಆಗಿದ್ದು, ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜ ಅಭಿನಯಿಸುತ್ತಿರುವ ವರದನಾಯಕ ಚಿತ್ರವನ್ನು ಅಯ್ಯಪ್ಪ ನಿರ್ದೇಶಿಸುತ್ತಿದ್ದು, ಶಂಕರ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಎಡಿಟಿಂಗ್‌ನ್ನು ಗೌತಮ್ ರಾಜು ತ್ವರಿತ ಗತಿಯಲ್ಲಿ ನಡೆಸುತ್ತಿದ್ದಾರೆ. ಸುದೀಪ್ ಮತ್ತು ಸರ್ಜರಿಗೆ ಜೋಡಿಯಾಗಿ ಸಮೀರಾ ರೆಡ್ಡಿ ಮತ್ತು ನಿಕಿಶಾ ಪಟೇಲ್ ನಟಿಸಿದ್ದಾರೆ.
ತೆಲುಗಿನ “ಲಕ್ಷ್ಯಂ”ನಲ್ಲಿ ಗೋಪಿಚಂದ ಮತ್ತು ಅನುಷ್ಕ ಮುಖ್ಯಭೋಮಿಕೆಯಲ್ಲಿ ನಟಿಸಿದ್ದರೆ, ಜಗಪತಿ ಬಾಬು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವರದನಾಯಕನಲ್ಲೂ ಜಗಪತಿ ಬಾಬುವಿನ ವಿಶೇಷ ಪಾತ್ರವನ್ನು ಸುದೀಪ್ ಮಾಡಿದ್ದಾರೆ. ಸುದೀಪ್‌ರ ಮೊದಲಾರ್ಧದ ಧ್ವನಿ ಮುದ್ರಿಸಲಾಗಿದ್ದು, ಎರಡನೆಯ ಅರ್ಧದ ಧ್ವನಿ ಮುದ್ರಣವನ್ನು ಅರ್ಜುನ್ ಜನ್ಯರ ರೀ-ರೆಕಾರ್ಡಿಂಗ್ ಮಾಡಿದ ನಂತರ ಮಾಡುತ್ತಾರೆ.

ಇದಕ್ಕೆ ಮೊದಲು, ಅಕ್ಟೋಬರ್ 20 ಅಥವಾ 21ಕ್ಕೆ ಚಿತ್ರದ ಧ್ವನಿಸುರಳಿಯನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech