Close X

ಮುಗಿಲ ಮಲ್ಲಿಗೆಯೋ ಚಿತ್ರದ ಧ್ವನಿಸುರಳಿ ಮಾರುಕಟ್ಟೆಗೆ

ಮುಗಿಲ ಮಲ್ಲಿಗೆಯೋ…. ಚಿತ್ರದ ಧ್ವನಿ ಸುರಳಿ ಸೋಮವಾರ ಸಂಜೆ ಮಲ್ಲೇಶ್ವರಂ ಕ್ಲಬ್‌ನಲ್ಲಿ ಪತ್ರಕರ್ತರ ಮತ್ತು ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿತು. ಪೂರ್ಣ ಸತ್ಯ, ಮೂರ್ಖ, ಸಿಟಿ ಮಾರ್ಕೆಟ್, ಏಪ್ರಿಲ್ ಫೂಲ್ ಚಿತ್ರಗಳನ್ನು ನಿರ್ದೇಶಿಸಿರುವ ಎಂ. ಎನ್. ಜಯರಾಮಯ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀ ಲಲಿತಾಂಭಿಕಾ ಪ್ರೊಡಕ್ಷನ್‌ಡಿಯಲ್ಲಿ ಶ್ರೀಮತಿ ಕೆ. ಪವಿತ್ರ ಜಯರಾಮ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೊದಲು ಪವಿತ್ರ ಜಯರಾಮ್ ಬಾಯ್ ಫ್ರೆಂಡ್ ಚಿತ್ರವನ್ನು ನಿರ್ಮಿಸಿದ್ದು, ಆ ಚಿತ್ರದ ಮೂಲಕ ದಿಲೀಪ್ ರಾಜ್‌ನನ್ನು ನಾಯಕನಾಗಿ ಪರಿಚಯಿಸಿದ್ದರು.

kannada-movie--mugila-malligeyo-audio-releaseಸಮಾರಂಭದಲ್ಲಿ ನಿರ್ಮಾಪಕಿ ಪವಿತ್ರ, ನಾಯಕ ಶಿವ್ ಶ್ರೀಕರ್, ರಂಜಿತಾ, ಬ್ಯಾಂಕ್ ಜರ್ನಾಧನ್, ಹಿತೈಷಿ, ನಿರ್ಮಾಪಕ ಕೃಷ್ಣಪ್ಪ, ಮುಂತಾದವರು ಪಾಲ್ಗೊಂಡಿದ್ದರು. ಸಂಭಾಷಣೆ ಬರಹಗಾರ ಗುಣವಂತ ಮಂಜು, ಚಿತ್ರದ ಛಾಯಾಗ್ರಾಹಕ ಶಂಕರ್, ಸಂಗೀತ ನಿರ್ದೇಶಕ ಮುರಳಿ ಆರ್ಯನ್ ತಮ್ಮ ಚಿತ್ರದ ಧ್ವನಿ ಸುರಳಿ ಬಿಡುಗಡೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಚಿತ್ರದ ಹೈಲೈಟ್, ಚೊಚ್ಚಲ ನಾಯಕನಾಗಿ ಅಭಿನಯಿಸುತ್ತಿರುವ ಶಿವ್ ಶ್ರೀಕರ್ ಮತ್ತು ಸಂಗೀತ ನಿರ್ದೇಶಕ ಮುರಳಿ ಆರ್ಯನ್ ಇಬ್ಬರೂ ಆಂಧ್ರದವರು. ಚಿತ್ರದ ನಾಯಕಿ ರಂಜಿತಾ ಮಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, “ಚಿತ್ರದಲ್ಲಿ ನಾನು ಒಬ್ಬ ಹಳ್ಳಿ ಹುಡುಗಿಯ ಪಾತ್ರವನ್ನು ಮಾಡಿದ್ದೇನೆ ಆದರೂ ಹಾಡು ಮತ್ತು ಹಾಡಿನ ದೃಶ್ಯಗಳು ಅತ್ಯಂತ ಮನಮೋಹಕವಾಗಿವೆ” ಎಂದರು.

ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್, ಶ್ರೀರಂಗ ಮತ್ತು ಕೆ. ಎಂ. ಇಂದ್ರ ಹಾಡುಗಳನ್ನು ಬರೆದಿದ್ದರೆ, ರಾಜೇಶ್ ಕೃಷ್ಣನ್, ನಂದಿತಾ, ರಮೇಶ್ ಚಂದ್ರ, ಹೇಮಂತ್, ಲಕ್ಷ್ಮಿ, ಚೈತ್ರ ಆ ಹಾಡುಗಳಿಗೆ ಜೀವ ತುಂಬಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech