Close X

ದಸರೆಗೆ “Mr. 420” ಮತ್ತು “ಗೋಕುಲ ಕೃಷ್ಣ”

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬಿಡುಗಡೆ ಅಕ್ಟೋಬರ್ 26ಕ್ಕೆ ಮುಂದೂಡಿರುವುದರಿಂದ, ನಾಳೆ ಶುಕ್ರವಾರ ಗೋಲ್ಡನ್ ಸ್ಟಾರ್ ಗಣೇಶ್, ರಂಗಾಯಣ ರಘು ಮತ್ತು ಸಾಧುಕೋಕಿಲ ಅಭಿನಯದ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಚಿತ್ರ ಮಿ. 420 ಮತ್ತು ಪ್ರಜ್ವಲ್ ದೇವರಾಜ್, ಅನನ್ಯ ಅಭಿನಯದ ಗೋಕುಲ ಕೃಷ್ಣ ಚಿತ್ರಗಳು ಬಿಡುಗಡೆ ಗೊಳ್ಳುತ್ತಿದೆ. ದಸರ ಹಬ್ಬದ ಸಾಲಿನಲ್ಲಿ ಬಿಡುಗಡೆ ಗೊಳ್ಳುತ್ತಿರುವುದರಿಂದ ಮಕ್ಕಳ ರಜಾ ಸಮಯವಾಗಿರುವುದರಿಂದ ಹೆಚ್ಚು ಪ್ರೇಕ್ಷಕರನ್ನು ಥಿಯೇಟರಿನೆಡೆಗೆ ಆಕರ್ಷಿಸುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.

ಸಂದೇಶ್ ನಾಗರಾಜ್, ಸಂದೇಶ್ ಕಂಬೈನ್ಸ್‍ನಡಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಂಗಾಯಣ ರಘು ಕಾಂಬಿನೇಷನ್‌ನಲ್ಲಿ ನಿರ್ಮಿಸಿರುವ ವಿ. 420 ಚಿತ್ರವು ಮನೆಮಂದಿಯೆಲ್ಲಾ ಕೂತು ನೋಡುವಂತಹ ಕಾಮಿಡಿ ಚಿತ್ರವಾಗಿದೆ. ಮೊದಲ ಬಾರಿಗೆ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸುತ್ತಿರುವ ಗಣೇಶ್, ಪ್ರೇಕ್ಷಕರ ಹೃದಯವನ್ನು ಹೇಗೆ ಕದಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

mr-420-gokula-krishna-movie-release

ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಕೊಟ್ಟಿದ್ದು ಆರ್. ಗಿರಿ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಚಂದ್ರುರವರ ಸಾಹಸ, ರಾಮು, ಮುರಳಿ ಮತ್ತು ಶಿವು ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಣೀತಾ, ಸಾಧುಕೋಕಿಲ, ಚಿಕ್ಕಣ್ಣ, ಪಂಕಜ್ ಮುಂತಾದವರಿದ್ದಾರೆ.

ಶೇಕರ್ ಗೌಡ ಮತ್ತು ನಾರಾಯಣ ಸ್ವಾಮಿ ಜೊತೆಯಾಗಿ, ಚೆನ್ನಿಗರಾಯ ಕಂಬೈನ್ಸ್‌ನಡಿಯಲ್ಲಿ ಗೋಕುಲ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ. ಹದಿನೈದು ವರ್ಷಗಳು ಅಮೇರಿಕೆಯಲ್ಲಿ ನೆಲೆಸಿ ಭಾರತಕ್ಕೆ ಮರಳುವ ನಮ್ಮ ಚಿತ್ರದ ನಾಯಕ ಕೃಷ್ಣನ ಸುತ್ತ ಸುತ್ತುವು ಕಥೆಯೇ “ಗೋಕುಲ ಕೃಷ್ಣ”. ನಿರ್ದೇಶಕ ಜಯ ಕಣ್ಣನ್ ತಮಿಳಿನ ನಾಡೋಡಿಗಳ್ ಮತ್ತು ಎಂಗೆಯುಂ ಎಪ್ಪೋದಂ ಚಿತ್ರದ ನಾಯಕಿ ಅನನ್ಯರನ್ನು ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ಒದಗಿಸಿದ್ದಾರೆ.

ವಿನೋದ್ ಭಾರತಿ ತಮ್ಮ ನಾಲ್ಕನೆಯಾ ಚಿತ್ರವಾದ ಗೋಕುಲ ಕೃಷ್ಣದಲ್ಲಿ ಛಾಯಾಗ್ರಹಣವನ್ನು ನಿರ್ವಹಿಸಿದ್ದು,ಎಸ್. ಎ. ರಾಜಕುಮಾರ ಸಂಗೀತ ಮಾಧುರ್ಯವನ್ನು ನೀಡಿದ್ದಾರೆ. ದೊಡ್ಡಣ್ಣ, ಶ್ರೀನಾಥ್, ಸಾಧುಕೋಕಿಲ, ಭವ್ಯ, ಸುರೇಶ್ ಚಂದ್ರ, ಕುರಿ ಪ್ರತಾಪ್, ಜಯಲಕ್ಷ್ಮೀ ಪಾಟೀಲ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಎರಡೂ ಚಿತ್ರಗಳು ನಮ್ಮ ಕನ್ನಡ ಚಿತ್ರಗಳೆ. ಹಾಗಾಗಿ ಎರಡರ ಮಧ್ಯೆ ಎಷ್ಟೇ ಹೋರಾಟ ಇದ್ದರೂ, ಎರಡೂ 100Days ಜಯಭೇರಿ ಭಾರಿಸಲಿ ಎಂದು ಆಶಿಸುವ ಕನ್ನಡ ಹನಿಗಳ ಬಳಗ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech