Close X

ನವೆಂಬರ್ 1ಕ್ಕೆ ನಕ್ಕು ನಗಿಸಲು ಬರುತ್ತಿದೆ ಡಕೋಟ ಪಿಕ್ಚರ್ಸ್

ನವೆಂಬರ್ 1, ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಕನ್ನಡ ಜನತೆಯನ್ನು ನಕ್ಕು ನಗಿಸಲು ಡಕೋಟಾ ಪಿಕ್ಚರ್ಸ್ ಬರುತ್ತಿದೆ. ಈ ಹಿಂದೆ ರಾಕಲೈನ್ ವೆಂಕಟೇಶ್ ಮತ್ತು ಓಂ ಪ್ರಕಾಶ್ ರಾವ್ ಡಕೋಟಾ ಎಕ್ಸ್‌ಪ್ರೆಸ್ ನೊಂದಿಗೆ ನಗಿಸಿದ್ದರು. ಅದೇ ಜೋಡಿ ಈಗ ಮತ್ತೊಮ್ಮೆ ನಿಮ್ಮನ್ನು ನಗಿಸಲು ಡಕೋಟಾ ಪಿಕ್ಚರ್ಸ್ ಆಗಿ ಬರುತ್ತಿದೆ. ಓಂ ಪ್ರಕಾಶ್ ರಾವ್‌ರವರೇ ನಿರ್ದೇಶಿಸಿರುವ ಡಕೋಟಾ ಪಿಕ್ಚರ್ಸ್ ಚಿತ್ರವು, ಹಿಂದಿಯ ಸೂಪರ್ ಹಿಟ್ ಚಿತ್ರ “ಮಾಲಾಮಾಲ್” ಚಿತ್ರದ ರೀಮೇಕ್ ಆಗಿದೆ.

dakota-pictures-nov-1st-releaseಚಿತ್ರಕ್ಕೆ ಪ್ರಿಯದರ್ಶಿನಿ ಕಥೆಯಿದ್ದು, ಗುರುದೇಸಾಯಿ ಮತ್ತು ಸರಿಗಮವಿಜಿಯವರ ಸಂಭಾಷಣೆ ಬರೆದಿದ್ದಾರೆ. ಗೀತರಚನೆಯ ಜೊತೆಗೆ ಸಂಗೀತವನ್ನು ಸಂಯೋಜಿಸಿದ್ದಾರೆ ಹಂಸಲೇಖ.

ಚಿತ್ರದಲ್ಲಿ ಒಂದು ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಮತ್ತು ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಸರಿಗಮ ವಿಜಿ ಚಿತ್ರದ ಪತ್ರಿಕಾಗೋಷ್ಠಿಯ ನಿರೂಪಣೆಯನ್ನು ವಹಿಸಿದ್ದರು. ಹಿರಿಯ ಕಲಾವಿದರಾದ ದೊಡ್ಡಣ್ಣ, ಮಂದೀಪ್ ರಾಯ್ ಮತ್ತು ಮುಖ್ಯಮಂತ್ರಿ ಚಂದ್ರು ರವರುಗಳು ಪ್ರೆಸ್ ಮೀಟ್‌ನಲ್ಲಿ ಪಾಲ್ಗೊಂಡಿದ್ದರು.

ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಳ್ಳುವ ಮೊದಲು ಚಿತ್ರವನ್ನು ವೀಕ್ಷಿಸಿದ ಚಿತ್ರದ ಹೀರೋ ರಾಕ್‌ಲೈನ್ ವೆಂಕಟೇಶ್ ಚಿತ್ರದಲಿ ತಮ್ಮ ಪಾತ್ರದ ಬಗ್ಗೆ ಭರವಸೆಯನ್ನು ಹೊಂದಿದ್ದರು. “ನಾನು ಉತ್ತಮ ಪ್ರಯತ್ನ ಮಾಡಿದ್ದೇನೆಂದು ಭಾವಿಸುತ್ತೇನೆ. ಹಂಸಲೇಖರ ಸಂಗೀತ ಅತ್ಯಮೋಘವಾಗಿದ್ದು, ಜಗದೀಶ್ ವಾಲಿಯವರ ಛಾಯಾಗ್ರಹಣ ರಂಜನೀಯ” ಎಂದರು.

ಚಿತ್ರದ ತಾರಾಗಣದಲ್ಲಿ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ಓಂಪ್ರಕಾಶ್‌ರಾವ್, ಮುಖ್ಯಮಂತ್ರಿಚಂದ್ರು, ನಿತಿಶಾ ಪಟೇಲ್, ಮನ್‌ದೀಪ್ ರಾಯ್ ಮುಂತಾದವರಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech