Close X

CCL Season 3ಗೆ ಮತ್ತೆರಡು ತಂಡಗಳ ಸೇರ್ಪಡೆ

CCL Celebrity Cricket Leagueನ ಮೂರನೇ ಆವೃತಿ ಮುಂದಿನ ವರ್ಷ 2013ರ ಫೆಬ್ರವರಿ 9ರಿಂದ ಕೊಚ್ಚಿಯಲ್ಲಿ ಶುರುವಾಗಲಿದೆ. ಇದೇನು ವಿಶೇಷ, ಪ್ರತಿ ವರ್ಷ ನಡೆಯುತ್ತೆ ಅಂತ ಯೋಚಿಸುತ್ತಿದ್ದೀರ. ನಮ್ಮ IPL – Indian Premier League ಗೆ ಮಿಗಿಲಂತೆ ಜನಪ್ರಿಯತೆ ಪಡೆಯುತ್ತಿರುವ CCLನ ಮೂರನೇ ಆವೃತ್ತಿಯಲ್ಲಿ ಇನ್ನೂ ಎರಡು ತಂಡಗಳು ಸೇರುತ್ತಿವೆ. ಇದರೊಂದಿಗೆ ಮೂರನೇ ಆವೃತ್ತಿಯ CCLನಲ್ಲಿ 8 ತಂಡಗಳು ಸೆಣಸಲಿವೆ.

2010ರಲ್ಲಿ ಆರಂಭಗೊಂಡ CCL, ಮೊದಲ ಆವೃತ್ತಿಯಲ್ಲಿ ನಾಲ್ಕೇ ತಂಡಗಳನ್ನು ಒಳಗೊಂಡಿತ್ತು. CCL 2010ರ ಯಶಸ್ಸಿನಿಂದ 2011ರಲ್ಲಿ ಮತ್ತೆರಡು ತಂಡಗಳು ಕೇರಳ ಸ್ಟ್ರೈಕರ್ಸ್ ಮತ್ತು ಬೆಂಗಾಲ್ ಟೈಗರ್ಸ್ ಸೇರ್ಪಡೆ ಹೊಂದಿತು.

ccl-press-meet

ಮೂರನೇ ಆವೃತ್ತಿಯ 2013ಕ್ಕೆ ವೀರ ಮರಾಠಿ ಮತ್ತು ಭೋಜಪುರಿ ದಬ್ಬಾಂಗ್ಸ್ ತಂಡಗಳು ಸೇರುತ್ತಿವೆ. ವೀರ ಮರಾಠಿ ತಂಡಕ್ಕೆ ಬಾಲಿವುಡ್ ಆಟಗಾರ ಮಹಾರಾಷ್ಟ್ರದ ರಿತೀಶ್ ದೇಶ್‌ಮುಖ್ ಒಡೆಯನಾಗಿ ತಂಡವನ್ನು ನಡೆಸುತ್ತಾರೆ. ಹಾಗೆ ಜನಪ್ರಿಯ ಭೋಜಪುರಿ ನಟ ಮನೋಜ್ ತಿವಾರಿ ಭೋಜಪುರಿ ದಬ್ಬಾಂಗ್ಸ್ ತಂಡವನ್ನು ಮುನ್ನಡೆಸುತ್ತಾರೆ. ಇದರೊಂದಿಗೆ CCL 2013ರಲ್ಲಿ ಪಾಲ್ಗೊಳ್ಳುವ ತಂಡಗಳೆಂದರೆ : ಕರ್ನಾಟಕ ಬುಲಡೋಜರ್ಸ್, ಬೆಂಗಾಲ್ ಟೈಗರ್ಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಚೆನೈ ರೈನೋಸ್, ವೀರ ಮರಾಠಾಸ್ ಮತ್ತು ಭೋಜಪುರಿ ದಬ್ಬಾಂಗ್ಸ್.

ಕಳೆದ ಎರಡು ಆವೃತ್ತಿಗಳನ್ನು ಗಮನಿಸಿದರೆ, ಕರ್ನಾಟಕ ಬುಲ್‌ಡೋಜರ್ಸ್ ತಂಡ ಬಲಶಾಲಿಯಾಗಿದ್ದರೂ, ಅದೃಷ್ಟ ಅದರ ಜೊತೆಗಿರದೆ ಎರಡು ಬಾರಿ 2011 ಮತ್ತು 2012ರಲ್ಲಿ ಫೈನಲ್‌ನಲ್ಲಿ ಕೊನೆಯವರೆಗೂ ಹೋರಾಟ ತೋರಿ ಸೋಲನ್ನು ಕಂಡಿತು. ಆದರೆ, ಈ ಬಾರಿಯಾದರೂ ಬಲಿಷ್ಠ ತಂಡಕ್ಕೆ ಉತ್ತಮ ಪ್ರದರ್ಶನ ತೋರುವ ತಂಡಕ್ಕೆ ಜಯಸಿಗಲಿ ಎಂದು ಆಶಿಸುತ್ತೇನೆ.

CCLನ ಜನಪ್ರಿಯತೆ ಎಷ್ಟರ ಮಟ್ಟಿಗಿದೆಯೆಂದರೆ, ಇತರ ಅಂತರರಾಷ್ಟ್ರೀಯ ಪಂದ್ಯಗಳನ್ನು ಟಿ.ವಿ ರೇಟಿಂಗ್ಸ್‌ಗಿಂತ ಅತೀ ಹೆಚ್ಚು ಇದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech