Close X

“ಜಿಂಕೆ ಮರೀನಾ” ಚಿತ್ರಕ್ಕೆ ಹೆಜ್ಜೆ ಹಾಕಿದ ಸುಮನ್ ರಂಗನಾಥ್

ನವೀನ್ ನಿರ್ದೇಶನದ “ಜಿಂಕೆ ಮರೀನಾ” ಚಿತ್ರಕ್ಕೆ ಲೂಸ್ ಮಾದ ಯೋಗಿ ಮತ್ತು ಸೋನಿಯಾ ಗೌಡ ಜೊತೆಯಾಗಿದ್ದಾರೆ. ಜಿಂಕೆ ಮರೀನಾ ಚಿತ್ರವು ತೆಲುಗುವಿನ ಹಿಟ್ ಚಿತ್ರ ಬಿಂದಾಸ್‌ನ ರೀಮೇಕ್ ಆಗಿದ್ದು, ಬಹುತೇಕ ಚಿತ್ರದ ಶೂಟಿಂಗ್ ಮುಗಿದಿದ್ದು, ಮೂರು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ.

jinke-marina-kannada-movie-making-05

ಇತ್ತೀಚೆಗೆ ಚಿತ್ರದ ಹಾಡೊಂದಕ್ಕೆ ನಟ ಯೋಗಿ ಜೊತೆಗೆ ಸೆಕ್ಸಿ ನಟಿ ಸುಮನ್ ರಂಗನಾಥ್ ರಾಕಲೈನ್ ಸ್ಟೂಡಿಯೋಸ್‌ನಲ್ಲಿ ಹೆಜ್ಜೆಹಾಕಿದ ಚಿತ್ರೀಕರಣವನ್ನು ಮಾಡಲಾಯಿತು. ಚಿತ್ರದ ನಿರ್ಮಾಪಕ ಹಾಗೂ ಚಿತ್ರದಲ್ಲಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಹೇಶ್ ಕೂಡ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಚಿತ್ರೀಕರಣವನ್ನು ಬ್ಯಾಂಕಾಕ್ ಮತ್ತು ಸಿಂಗಾಪುರಿನಲ್ಲಿ ನಡೆಸಲು ನಿರ್ದರಿಸಿದ್ದಾರೆ ನಿರ್ದೇಶಕ ನವೀನ್.

ಸುಮನ್ ರಂಗನಾಥ್ ಜನಪ್ರಿಯ ನಟ ಡಾ. ವಿಷ್ಣುವರ್ಧನ್, ಅಂಬರೀಶ್‌ರವರುಗಳೊಡನೆ ನಟನೆಯನ್ನು ಮಾಡಿದವರು, ಹಿರಿಯ ನಟಿ, ತನಗಿಂತ 20ವರ್ಷ ಚಿಕ್ಕವ ಯೋಗೀಶ್ ಜೊತೆ ನೃತ್ಯಮಾಡಿರುವುದು ಗಮಾನಾರ್ಹ. ಈ ಮೊದಲು ಕೂಡ ಸುಮನ್ ರಂಗನಾಥ್ ಉತ್ಸಾಹೀ ಶಿಕ್ಷಕಿಯ ಪಾತ್ರವನ್ನು ಯೋಗೀಶ್ ಜೊತೆ ಸಿದ್ಲಿಂಗೂವಿನಲ್ಲಿ ಮಾಡಿದ್ದರು.

ಮೊನ್ನೆಯಷ್ಟೆ ಬಿಡುಗಡೆಯಾದ ಶಿವಣ್ಣರ ಶಿವ ಚಿತ್ರಕ್ಕೂ ಸಹ ಸುಮನ್ ರಂಗನಾಥ್ ಹೆಜ್ಜೆಹಾಕಿದ್ದಾರೆ. ಒಂ ಪ್ರಕಾಶ್ ರಾವ್ ನಿರ್ದೇಶನದ ಶಿವ ಚಿತ್ರದಲ್ಲಿ ಒಂದು ಐಟಂ ಹಾಡಿಗೆ ಸುಮನ್ ರಂಗನಾಥ್ ನೃತ್ಯಮಾಡಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech