Close X

ದುನಿಯಾ ವಿಜಯ್‌ನ “ಜಯಮ್ಮನ ಮಗ” ಸೆಪ್ಟೆಂಬರ್ 28ಕ್ಕೆ ಸೆಟ್ಟೇರಲಿದೆ

ತಮ್ಮದೇ ಬ್ಯಾನರ್ “ವಿಜಯ್ ಎಂಟರ್‌ಪ್ರೈಸಸ್”ನಡಿಯಲ್ಲಿ ದುನಿಯಾ ವಿಜಯ್‌ ಮೊಟ್ಟ ಮೊದಲ ಬಾರಿಗೆ “ಜಯಮ್ಮನ ಮಗ” ಚಿತ್ರವನ್ನು ತಮ್ಮ ಸ್ನೇಹಿತ ರಮೇಶ್‌ನೊಂದಿಗೆ ಜೊತೆಗೂಡಿ ತಯಾರಿಸುತ್ತಿದ್ದು, ಇದೇ ಸೆಪ್ಟೆಂಬರ್ 28ಕ್ಕೆ ಸೆಟ್ಟೇರಲಿದೆ. ನಟ ರವಿ ಕಿರಣ್ ವಿಕಾಸ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರವಿಕಿರಣ್ ಈ ಮೊದಲು ಯೋಗರಾಜ್ ಭಟ್‌ರ ಡ್ರಾಮಾ ಚಿತ್ರಕ್ಕೆ ಜಂಟಿಯಾಗಿ ಸ್ಕ್ರಿಪ್ಟ್ ಬರೆದಿದ್ದು, ಹಲವು ಟಿ.ವಿ ಶೋಗಳಲ್ಲಿ ಕೂಡ ನಟಿಸಿದ್ದಾರೆ.

Jayammana-Maga-Launch

ಜಯಮ್ಮನ ಮಗ ಚಿತ್ರದ ವಿವರವನ್ನು ನೀಡಲು ವಿಜಯ್ ಸುದ್ದಿಗೋಷ್ಟಿಯನ್ನು ಕರೆದಿದ್ದು, ನಿರ್ದೇಶಕ ವಿಕಾಸ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಗ್ನಾನ್ ಮತ್ತು ಗೀತರಚನೆಕಾರ ಯೋಗರಾಜ್ ಭಟ್ ಸುದ್ದಿಗೋಷ್ಟಿಯಲ್ಲಿ ಉಪಸ್ತಿತರಿದ್ದರು. ರಂಗಾಯಣ ರಘು ಕೂಡ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು. ಸುದ್ದಿಗೋಷ್ಟಿಯಲ್ಲಿ ವಿಜಯ್ ಪ್ರಮುಖ ವಿಲ್ಲನ್ ಪಾತ್ರವನ್ನು ಮತ್ತು ಮೊದಲ ಬಾರಿಗೆ ಸ್ಟಂಟ್ಸ್ ನಿರ್ದೇಶನ ಮಾಡುತ್ತಿರುವ ತಮ್ಮ ಸ್ನೇಹಿತರುಗಳನ್ನು ಪರಿಚಯಿಸಿದರು. ಯೋಗರಾಜ್ ಭಟ್ ಮತ್ತು ಸೂರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ವಿಜಯ್‌ರನ್ನು ಚಿತ್ರದ ನಿರ್ದೇಶನಕ್ಕೆ ಈ ಮೊದಲು ಆಯ್ಕೆ ಮಾಡಲಾಗಿತ್ತು. ಆದರೆ, ವಿಜಯ್ ಈಗಾಗಲೇ ಒಂದು ಚಿತ್ರವನ್ನು ನಿರ್ದೇಶಿಸುತ್ತಿರುವುದರಿಂದ ಅವರ ಬದಲಿಗೆ ವಿಕಾಸ್‌ರನ್ನು ಆಯ್ಕೆ ಮಾಡಲಾಯಿತು ಎಂದರು ದುನಿಯಾ ವಿಜಯ್.

ಚಿತ್ರದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಮತ್ತು ದೀಪಾ ಸನ್ನಿಧಿ ನಟಿಸುತ್ತಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech