Close X

ಈ ವಾರ ತೆರೆಗೆ – ಸಾಗರ್, 12AM, ಮುತ್ತಿನ ಹನಿ

ನಾಳೆ ಶುಕ್ರವಾರ (Aug 10th 2012) ತೆರೆಗೆ ಬರುತ್ತಿರುವ ಚಿತ್ರಗಳೆಂದರೆ ಪ್ರಜ್ವಲ್ ದೇವರಾಜ್ ನಟಿಸಿರುವ ಬಹು ನಿರೀಕ್ಷೆಯ ಚಿತ್ರ “ಸಾಗರ್”, ಕಾಶಿನಾಥ್‌‌ರ ಮಗ ಕಾರ್ತಿಕ್ ನಿರ್ದೇಶನದ “12AM” ಮತ್ತು ಹೊಸಬರೇ ಕೂಡಿ ಮಾಡಿರುವ ಚಿತ್ರ “ಮುತ್ತಿನ ಹನಿ”.

ಸಾಗರ್:

Sagar-Kannada-Movie-Releaseರಾಮು ಎಂಟರ್‌ಪ್ರೈಸಸ್‌ ನಿರ್ಮಾಣದ, ಎಂ. ಡಿ. ಶ್ರೀಧರ್ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟಿಸಿರುವ “ಸಾಗರ್” ಚಿತ್ರ ನಾಳೆ ಶುಕ್ರವಾರ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್‌ಗೆ ಸಾಥ್ ಕೊಡುತ್ತಿದ್ದಾರೆ ಮೂವರು ನಾಯಕಿಯರು, ರಾಧಿಕಾ ಪಂಡಿತ್, ಹರಿಪ್ರಿಯಾ ಮತ್ತು ಸಂಜನಾ ಗರ್ಲಾನಿ. ಚಿತ್ರದ ವಿಶೇಷತೆಯೆಂದರೆ, ಮಗಧೀರ ಖ್ಯಾತಿಯ ದೇವಗಿಲ್ ಸಾಗರ್ ಚಿತ್ರದಲ್ಲಿ ಅಭಿನಯಿಸಿರುವುದು. ಇದು ಇವರ ಮೊದಲ ಕನ್ನಡ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ವಿನಯ್ ಪ್ರಕಾಶ್, ಸಂಗೀತಾ, ಮುಂತಾದವರು ಕಾಣಿಸಿಕೊಂಡಿದ್ದಾರೆ.

ಸಾಗರ್ ಸ್ವಮೇಕ್ ಚಿತ್ರವಾಗಿದ್ದು, ಎಂ. ಡಿ. ಶ್ರೀಧರ್ ತಾವೇ ಸ್ವತಃ ಕಥೆಯನ್ನು ಹೆಣೆದಿದ್ದಾರೆ. ಬಿ. ಎ. ಮಧು ಚಿತ್ರಕ್ಕೆ ಸಂಭಾಷಣೆಯನ್ನು ಒದಗಿಸಿದ್ದಾರೆ. ಕೃಷ್ಣಕುಮಾರ್‌ರ ಛಾಯಾಗ್ರಹಣ ಕೈಚಳಕ ಚಿತ್ರಕ್ಕಿದೆ. ಗುರುಕಿರಣ್‌ರ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

Hit Songs from the Movie :


Kayyaki Kayyaki song

Koli Kodagana Nungitta

Modhale Yeke
Sigalilla Neenu

Ondharli Morning

Bike Hattidhare

12 AM:
12-AM-Kannada-Movie

ಮೊದಲ ಬಾರಿಗೆ ಕಾಶಿನಾಥ್‌ರ ಮಗ ಕಾರ್ತಿಕ್ ’12AM ಮಧ್ಯರಾತ್ರಿ’ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ವಿಶೇಷವೆಂದರೆ, ಕಾರ್ತಿಕ್ ತಮ್ಮ ತಂದೆಯವರ ಗರಡಿಯಲ್ಲಿ ಪಳಗಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದು, ಕಾಶಿನಾಥ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿರುವುದು. ಮತ್ತೊಂದು ಬಹು ವಿಶೇಷ ಈ ಚಿತ್ರದ ಬಗ್ಗೆಯೆಂದರೆ, ಇಡೀ ಚಿತ್ರವನ್ನು ರಾತ್ರಿಯೇ ಚಿತ್ರೀಕರಿಸಿರುವುದು.

ಕಾಶಿನಾಥ್ ಮೆಡಿಕಲ್ ಕಾಲೇಜು ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ’ಬಾಜಿ’ ಕಟ್ಟಿ ಸೋತ ಅಲೋಕ್ ಕಾಶಿನಾಥ್ ಇಲ್ಲಿ ಅಭಿಮನ್ಯು ಆಗಿದ್ದಾರೆ, ಅವರೇ ನಾಯಕ. ನಾಯಕಿಯಾಗಿ ದಿವ್ಯಾ ಶ್ರೀಧರ್ ನಟಿಸಿದ್ದಾರೆ. ಚಿತ್ರಕ್ಕೆ ರಾಜೇಶ್ ರಾಮನಾಥನ್‌ರ ಸಂಗೀತವಿದೆ. ಚಿತ್ರವನ್ನು ಪ್ರತಿಮಾ ವಿಜಯಕುಮಾರ್ ನಿರ್ಮಿಸಿದ್ದಾರೆ.

ಮುತ್ತಿನ ಹನಿ:

ರಾಜರೆಡ್ಡಿ ನಿರ್ದೇಶನದ ಹೊಸಬರ ಚಿತ್ರ “ಮುತ್ತಿನ ಹನಿ” ಈ ವಾರ ತೆರೆಗೆ. ಶ್ರೀಮಂಜು ನಾಯಕನಾಗಿ ಮತ್ತು ಸ್ವಾತಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಹೊಸಬರ ಚಿತ್ರವಾದ ಮಾತ್ರಕ್ಕೆ ನಿರ್ದೇಶಕರೇನೂ ಹೊಸಬರಲ್ಲ. ಈ ಹಿಂದೆ “ಗಂಧದ ಗೊಂಬೆ” ಚಿತ್ರವನ್ನು ನಿರ್ದೇಶಿಸಿದವರು.

muttina-hani-poster

ವೃತ್ತಿಯಲ್ಲಿ ವೈದ್ಯರಾಗಿರುವ ಗುರುರಾಜ್ ಕವಲೂರ್ ಪ್ರವೃತ್ತಿಯಲ್ಲಿ ಸಿನಿಮಾ ಬಗ್ಗೆ ಆಸಕ್ತಿಯಿದ್ದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ದೇಶ ಪ್ರೇಮ ಮತ್ತು ಯುವಕ-ಯುವತಿಯರ ಪ್ರೇಮಕಥೆಯಿಂದೆಯಂತೆ ಚಿತ್ರದಲ್ಲಿ. ಚಿತ್ರದ ವಿಶೇಷವೆಂದರೆ ಉತ್ತರ ಕರ್ನಾಟಕದಲ್ಲೇ ಚಿತ್ರೀಕರಿಸಿರುವುದು. ಬಿ. ಶಂಕರ್ ಸಂಭಾಷಣೆ, ಲಕ್ಷ್ಮಿಕಾಂತ್ ಛಾಯಾಗ್ರಹಣ, ಜೋಸೆಫ್ ಸಂಗೀತ ಕೊಟ್ಟಿದ್ದಾರೆ.

ಕಿಲ್ಲರೇ ವೆಂಕಟೇಶ್, ದೇವಾನಂದ್, ಬಿರದಾರ್, ಸುನೇತ್ರಾ ಪಂಡಿತ್, ಮಾಲತಿ ಸರದೇಶಪಾಂಡೆ, ಮೈಕೆಲ್ ಮಧು, ಕುಣಿಗಲ್ ಭರತ್, ಪ್ರಸನ್ನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech