Close X

ಸೆಪ್ಟೆಂಬರ್ 3ರಿಂದ ಶಿವಣ್ಣ – ಸೂರಿ ಕಾಂಬಿನೇಷನ್‌ನ ಕಡ್ಡಿಪುಡಿ ಶೂಟಿಂಗ್ ಶುರು

ಸೂರಿ ನಿರ್ದೇಶನದ ಮತ್ತೊಂದು ನಿರೀಕ್ಷಿತ ಚಿತ್ರ ಕಡ್ಡಿಪುಡಿ ಸೆಪ್ಟೆಂಬರ್ 3ರಿಂದ ಶೂಟಿಂಗ್ ಆರಂಭಿಸಲಿದೆ. ಶಿವಣ್ಣ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಶೂಟಿಂಗ್, ಸೆಪ್ಟೆಂಬರ್ 3 ಸೋಮವಾರ HMT ಸರ್ಕಲ್ ನಲ್ಲಿ ನಡೆಯಲಿದೆ. ಸೋಮವಾರದಂದು, ಶಿವರಾಜ್‌ಕುಮಾರ್ ಮತ್ತು ಉಳಿದ ನಟರು ಶೂಟಿಂಗ್‌ನಲ್ಲಿ ಪಾಲ್ಗೊಂಡರೆ, ರಾಧಿಕಾ ಪಂಡಿತ್ ಸ್ವಲ್ಪ ತಡವಾಗಿ ಶೂಟಿಂಗ್ ತಂಡವನ್ನು ಸೇರಲಿದ್ದಾರೆ.

Kaddipudi-Muhurthaಸ್ವಯಂವರ ಚಂದ್ರು ನಿರ್ಮಾಣದ ಈ ಚಿತ್ರವನ್ನು ಮೈಸೂರು ತದನಂತರ ಬೆಂಗಳೂರುಗಳಲ್ಲಿ ಶೂಟಿಂಗ್ ಮಾಡಲಿದ್ದಾರೆ. ಚಿತ್ರದ ಕೆಲವು ಸನ್ನಿವೇಶಗಳನ್ನು ವಾಘಾ ಬಾರ್ಡರ್‌ನಲ್ಲಿ ಚಿತ್ರೀಕರಿಸಿದರೆ, ಒಂದು ಹಾಡಿನ ಚಿತ್ರೀಕರಣವನ್ನು ಅಪ್ಪುವಿನ ಜಾಕಿ ಚಿತ್ರದಲ್ಲಿ ಚಿತ್ರೀಕರಿಸಿದ ನಮೀಬಿಯಾನಲ್ಲಿ ಚಿತ್ರೀಕರಿಸಲಾಗುವುದು.

ಹರಿಕೃಷ್ಣರ ಸಂಗೀತ ಮತ್ತು ಎಸ್. ಕೃಷ್ಣರ ಛಾಯಾಗ್ರಹಣ ಚಿತ್ರಕ್ಕಿದೆ. ರೇಣುಕಾ ಪ್ರಸಾದ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದಂತೆ ರಂಗಾಯಣ ರಘು ಮತ್ತು ಅವಿನಾಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech